ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಯುವ ಟಿಟಿ: ಭಾರತದ ಜೋಡಿ ಫೈನಲ್‌ಗೆ

Published 2 ಡಿಸೆಂಬರ್ 2023, 19:18 IST
Last Updated 2 ಡಿಸೆಂಬರ್ 2023, 19:18 IST
ಅಕ್ಷರ ಗಾತ್ರ

ವಿಜಯವಾಡ: ಭಾರತದ ಜೆನ್ನಿಫರ್ ವರ್ಗೀಸ್ ಮತ್ತು ದಿವ್ಯಾನ್ಶಿ ಭೌಮಿಕ್ ಜೋಡಿ, ಸ್ಲೊವೇನಿಯಾದ ನೋವಾ ಗೊರಿಕಾದಲ್ಲಿ ನಡೆಯುತ್ತಿರುವ ಐಟಿಟಿಎಫ್‌ ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ 15 ವರ್ಷದೊಳಗಿನ ಬಾಲಕಿಯರ ಡಬಲ್ಸ್‌ ಫೈನಲ್ ತಲುಪಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಆಟಗಾರ್ತಿಯರು 14–12, 11–9, 11–8 ರಿಂದ ಫ್ರಾನ್ಸ್–ಚೀನಾ ಜೋಡಿಯಾದ ಲಿಯೊನಾ ಹೊಚಾರ್ಟ್‌–ನಿನಾ ಗುವೊ ಝೆಂಗ್‌ ಅವರನ್ನು ಸೋಲಿಸಿದರು. 15 ವರ್ಷ ದೊಳಗಿನ ಮಿಶ್ರ ಡಬಲ್ಸ್‌ನಲ್ಲಿ ಜೆನ್ನಿಫರ್– ಆರ್‌.ಅಭಿನಂದನ್ ಜೋಡಿ ಕಂಚಿನ ಪದಕ ಗೆದ್ದುಕೊಂಡಿದೆ. ಇವರಿಬ್ಬರು ಚೀನಾ ಜೋಡಿಯನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT