ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್: ಶ್ರೀಕಾಂತ್, ಮಿಥುನ್ ಮುನ್ನಡೆ

Published 31 ಜನವರಿ 2024, 13:00 IST
Last Updated 31 ಜನವರಿ 2024, 13:00 IST
ಅಕ್ಷರ ಗಾತ್ರ

ಬ್ಯಾಂಕಾಂಕ್ (ಪಿಟಿಐ): ಭಾರತದ ಕಿದಂಬಿ ಶ್ರೀಕಾಂತ್ ಅವರು ಥಾಯ್ಲೆಂಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಚೀನಾ ತೈಪಿಯ ವಾಂಗ್‌ ತ್ಸು ಅವರನ್ನು ಬುಧವಾರ ನೇರ ಸೆಟ್‌ಗಳಿಂದ ಸೋಲಿಸಿದರು. ವಿಶ್ವದ ಮಾಜಿ ಅಗ್ರ ಕ್ರಮಾಂಕದ ಆಟಗಾರ 22–20, 21–19 ರಿಂದ ವಾಂಗ್ ಅವರನ್ನು ಸೋಲಿಸಲು 45 ನಿಮಿಷ ಸೆಣಸಾಡಬೇಕಾಯಿತು.

ಶ್ರೀಕಾಂತ್ ಎರಡನೇ ಸುತ್ತಿನಲ್ಲಿ ಸ್ವದೇಶದ ಮಿಥುನ್ ಮಂಜುನಾಥ್ ಅವರನ್ನು ಎದುರಿಸಲಿದ್ದಾರೆ. ಮಿಥುನ್ ಇನ್ನೊಂದು ಪಂದ್ಯದಲ್ಲಿ ಹಾಂಗ್‌ಕಾಂಗ್‌ನ ಜೇಸನ್ ಗುಣವಾನ್ ಅವರನ್ನು 21–17, 21–8 ರಿಂದ ಹಿಮ್ಮೆಟ್ಟಿಸಿದರು.

ಭಾರತದ ಎಸ್‌.ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಕೂಡ ನೇರ ಸೆಟ್‌ ಗೆಲುವಿನೊಡನೆ ಅಭಿಯಾನ ಆರಂಭಿಸಿದರು. ಅವರು 21–14, 21–17ರಿಂದ ಮಲೇಷ್ಯಾದ ಲಿಯಾಂಗ್ ಜುನ್ ಹಾವೊ ಅವರನ್ನು ಮಣಿಸಿದರು

ಆದರೆ ಸಮೀರ್ ವರ್ಮಾ ಮೊದಲ ಸುತ್ತಿನಲ್ಲೇ ಹಾಂಗ್‌ಕಾಂಗ್‌ನ ಆ್ಯಂಗಸ್ ಎನ್ಜಿ ಕಾ ಲಾಂಗ್ ಅವರೆದುರು 14–21, 18–21ರಲ್ಲಿ ಸೋಲನುಭವಿಸಿದರು. 

ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋಡ್ ಮತ್ತು ಅಶ್ಮಿತಾ ಚಲಿಹಾ ಎರಡನೇ ಸುತ್ತಿಗೆ ಮುನ್ನಡೆದರು. ಅಶ್ಮಿತಾ 21–10, 21–16 ರಿಂದ ವಾಂಗ್‌ ಲಿಂಗ್ ಚಿಂಗ್ ಅವರನ್ನು ಪರಾಭವಗೊಳಿಸಿದರೆ, ಮಾಳವಿಕಾ 22–20, 21–8 ರಿಂದ ಪೆರುವಿನ ಇನೆಸ್ ಕ್ಯಾಸ್ಟಿಲೊ ಸಲಝಾರ್ ಅವರನ್ನು ಹಿಮ್ಮೆಟ್ಟಿಸಿದರು.

ಮಾಳವಿಕಾ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಬುಸನನ್ ಒಂಗಮ್‌ರುಂಗ್ಫನ್ ಅವರನ್ನು ಎದುರಿಸಲಿದ್ದಾರೆ. ಥಾಯ್ಲೆಂಡ್‌ನ ಸ್ಪರ್ಧಿ 21–14, 21–18 ರಿಂದ ಭಾರತದ ಇಮದ್ ಫರೂಕಿ ಸಮಿಯಾ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT