ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಏಷ್ಯಾ ಜೂನಿಯರ್ ಟಿಟಿ: ಭಾರತ ತಂಡಗಳಿಗೆ ಜಯ

Published 28 ಮೇ 2024, 15:46 IST
Last Updated 28 ಮೇ 2024, 15:46 IST
ಅಕ್ಷರ ಗಾತ್ರ

ನವದೆಹಲಿ: ಭಾರತ 19 ವರ್ಷದೊಳಗಿನ ಬಾಲಕಿಯರ ತಂಡ ಕ್ಯಾಂಡಿಯಲ್ಲಿ ನಡೆದ ದಕ್ಷಿಣ ಏಷ್ಯಾ ಯೂತ್‌ ಟೆಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾವನ್ನು 3–0 ಅಂತರದಿಂದ ಸೋಲಿಸಿ ಪ್ರಶಸ್ತಿ ಉಳಿಸಿಕೊಂಡಿದೆ. 

ಸೆಮಿಫೈನಲ್‌ನಲ್ಲಿ ನೇಪಾಳ ತಂಡವನ್ನು 3–0 ಅಂತರದಿಂದ ಭಾರತ ಮಣಿಸಿತ್ತು. 

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಸಯಾಲಿ ವಾನಿ 11-6, 12-10, 11-8ರಲ್ಲಿ ಬಿಮಂಡಿ ಬಂಡಾರ ವಿರುದ್ಧ, ಪ್ರೀತಾ ವರ್ತಿಕರ್ 7-11, 11-3, 11-7, 6-11, 11-8ರಲ್ಲಿ ತಮಡಿ ಕವಿಂಧ್ಯಾ ವಿರುದ್ಧ ಗೆದ್ದರೆ, ತನೀಶಾ ಕೊಟೆಚಾ 11-8, 11-7, 11-7ರಲ್ಲಿ ದಿವ್ಯಾ ಧರಣಿ ವಿರುದ್ಧ ಗೆದ್ದು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

15 ವರ್ಷದೊಳಗಿನವರ ವಿಭಾಗದ ಫಲಿತಾಂಶವೂ ಭಿನ್ನವಾಗಿರಲಿಲ್ಲ.

ದಿವ್ಯಾಂಶಿ ಬೌಮಿಕ್ 11-8, 11-7, 11-9ರಲ್ಲಿ ಯೋಶಿನಿ ಜಯವರ್ಧನೆ ವಿರುದ್ಧ ಗೆದ್ದರೆ, ಸಿಂಡ್ರೆಲಾ ದಾಸ್ 11-9, 11-9, 11-4ರಲ್ಲಿ ಶಾನ್ಯಾ ಮುತ್ತುಲಿ ವಿರುದ್ಧ ಜಯ ಗಳಿಸಿದರೆ, ಕಾವ್ಯಾ ಭಟ್ 11-3, 11-8, 11-7ರಲ್ಲಿ ಸಮಿಂದಿ ವೀರಸೂರ್ಯ ವಿರುದ್ಧ ಜಯ ಸಾಧಿಸಿದರು.

15 ವರ್ಷದೊಳಗಿನ ಬಾಲಕರ ಫೈನಲ್‌ನಲ್ಲಿ ಆತಿಥೇಯರ ವಿರುದ್ಧ ಸಾರ್ಥಕ್ ಆರ್ಯ ತಮ್ಮ ಎರಡೂ ಸಿಂಗಲ್ಸ್‌ ಪಂದ್ಯಗಳನ್ನು ಗೆದ್ದು ಭಾರತದ ಗೆಲುವಿನ ರೂವಾರಿಯಾದರು.

ಸಾರ್ಥಕ್ ಮೊದಲು ನವಿರು ನೆತ್ಸಿತಾ ಅವರನ್ನು 11-4, 11-5, 11-5 ರಿಂದ ಸೋಲಿಸಿದರು. ಸೋಹಮ್ ಮುಖರ್ಜಿ ಅವರು ಅಕಿಯಾನ್ ಬೋಜಿತ್ ಅವರನ್ನು 11-6, 11-6, 11-5 ರಿಂದ ಸೋಲಿಸಿ 2-0 ಮುನ್ನಡೆ ಸಾಧಿಸಿದರು.

ಸಾಹಿಲ್ ರಾವತ್ 7-11, 11-3, 11-6, 9-11, 10-12 ಅಂತರದಲ್ಲಿ ಅಗಸ್ತ್ಯ ಆನಂದಿತಾ ವಿರುದ್ಧ ಸೋತರು.

ಆದರೆ, ಸಾರ್ಥಕ್ ಅವರು ಅಕಿಯಾನ್ ಬೋಜಿತ್ ಅವರನ್ನು 11-3, 11-8, 11-8 ಸೆಟ್ ಗಳಿಂದ ಸೋಲಿಸಿ ಪ್ರಾಬಲ್ಯ ಸಾಧಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT