ಖೇಲೊ ಇಂಡಿಯಾ: ಮಹಾರಾಷ್ಟ್ರಕ್ಕೆ ಸಮಗ್ರ ಪ್ರಶಸ್ತಿ

7
ಖೇಲೋ ಇಂಡಿಯಾ ಯುವ ಕ್ರೀಡಾಕೂಟಕ್ಕೆ ತೆರೆ

ಖೇಲೊ ಇಂಡಿಯಾ: ಮಹಾರಾಷ್ಟ್ರಕ್ಕೆ ಸಮಗ್ರ ಪ್ರಶಸ್ತಿ

Published:
Updated:

ಪುಣೆ : ಆತಿಥೇಯ ಮಹಾರಾಷ್ಟ್ರ, ಭಾನುವಾರ ಇಲ್ಲಿ ಮುಗಿದ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದೆ.

ಮಹರಾಷ್ಟ್ರ ತಂಡದವರು ಒಟ್ಟು 228 ಪದಕಗಳನ್ನು ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಇದರಲ್ಲಿ 85 ಚಿನ್ನ, 62 ಬೆಳ್ಳಿ ಮತ್ತು 81 ಕಂಚಿನ ಪದಕಗಳು ಸೇರಿವೆ.

ಹರಿಯಾಣ ತಂಡದವರು ರನ್ನರ್ಸ್‌ ಅಪ್‌ ಆಗಿದ್ದಾರೆ. ಈ ತಂಡ 178 ಪದಕಗಳನ್ನು (62 ಚಿನ್ನ, 56 ಬೆಳ್ಳಿ ಮತ್ತು 60 ಕಂಚು) ಜಯಿಸಿದೆ. 136 ಪದಕಗಳನ್ನು ಗೆದ್ದ ದೆಹಲಿ ಮೂರನೇ ಸ್ಥಾನ ತನ್ನದಾಗಿಸಿಕೊಂಡಿದೆ.

ಸುರಭಿ, ಮಾನುಷ್‌ ಚಾಂಪಿಯನ್‌: ಅಂತಿಮ ದಿನ ನಡೆದ 21 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಟೇಬಲ್‌ ಟೆನಿಸ್‌ ಸ್ಪರ್ಧೆಗಳಲ್ಲಿ ಪಶ್ಚಿಮ ಬಂಗಾಳದ ಸುರಭಿ ಪಟ್ವಾರಿ ಮತ್ತು ಗುಜರಾತ್‌ನ ಮಾನುಷ್‌ ಶಾ ಚಾಂಪಿಯನ್‌ ಆದರು.

ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಸುರಭಿ 11–8, 11–5, 10–12, 10–12, 11–7, 7–11, 16–14ರಲ್ಲಿ ಕೌಶಾನಿ ನಾಥ್ ಅವರನ್ನು ಮಣಿಸಿದರು.

ಬಾಲಕರ ಸಿಂಗಲ್ಸ್‌ ವಿಭಾಗದ ಅಂತಿಮ ಘಟ್ಟದ ಹೋರಾಟದಲ್ಲಿ  ಮಾನುಷ್‌ 11–8, 7–11, 10–12, 11–9, 11–7, 8–11, 11–4ರಲ್ಲಿ ಅನಿರ್ಬಾನ್‌ ಘೋಷ್‌ ಎದುರು ಗೆದ್ದರು.

21 ವರ್ಷದೊಳಗಿನವರ ವಾಲಿಬಾಲ್‌ ಸ್ಪರ್ಧೆಯಲ್ಲಿ ತಮಿಳುನಾಡು ಮತ್ತು ಕೇರಳ ಪ್ರಶಸ್ತಿ ಗೆದ್ದವು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ತಮಿಳುನಾಡು 23–25, 11–25, 25–23, 25–18, 15–9ರಲ್ಲಿ ಕೇರಳವನ್ನು ಮಣಿಸಿತು. 

ಬಾಲಕರ ವಿಭಾಗದ ಫೈನಲ್‌ನಲ್ಲಿ ಕೇರಳ 21–15, 25–15, 25–23, 25–20ರಲ್ಲಿ ತಮಿಳುನಾಡು ಎದುರು ಗೆದ್ದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !