ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಯಿಂಗ್ ಪಟು ದತ್ತು ಭೋಕನಾಳ್ ನಿರಾಳ

Last Updated 23 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ರೋಯಿಂಗ್ ಪಟು ದತ್ತು ಭೋಕನಾಳ ಅವರ ಮೇಲೆ ಹಾಕಲಾಗಿದ್ದ ಎರಡು ವರ್ಷಗಳ ನಿಷೇಧ ಶಿಕ್ಷೆಯನ್ನು ಭಾರತ ರೋಯಿಂಗ್ ಫೆಡರೇಷನ್ ರದ್ದು ಮಾಡಿದೆ.

ಕಳೆದ ಏಷ್ಯನ್ ಗೇಮ್ಸ್‌ನ ಪುರುಷರ ಕ್ವಾಡ್ರಾಪಲ್ ಸ್ಕಲ್ಸ್‌ನಲ್ಲಿ ಚಿನ್ನ ಗೆದ್ದಿದ್ದ ತಂಡದಲ್ಲಿ ಭೋಕನಾಳ್ ಇದ್ದರು. ಹೋದ ಮಾರ್ಚ್‌ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಸಿಂಗಲ್ ಸ್ಕಲ್‌ ರೇಸ್‌ನ ಅರ್ಧದಲ್ಲಿಯೇ ದತ್ತು ಮರಳಿದ್ದರು. ಅದರಿಂದಾಗಿ ಅವರ ಮೇಲೆ ಆರ್‌ಎಫ್‌ಐ ನಿಷೇಧ ಶಿಕ್ಷೆ ವಿಧಿಸಿತ್ತು.

ಭಾರತ ಒಲಿಂಪಿಕ್ ಸಂಸ್ಥೆಯ ಮುಖ್ಯಸ್ಥ ನರೀಂದರ್ ಭಾತ್ರಾ ಅವರು ಆರ್‌ಎಫ್‌ಐನೊಂದಿಗೆ ಚರ್ಚಿಸಿ ಭೋಕನಾಳ ಶಿಕ್ಷೆ ತೆರವುಗೊಳ್ಳುವಂತೆ ಮಾಡಿದರು. ಇದರಿಂದಾಗಿ ಸ್ಪರ್ಧಿಯು ಟೊಕಿಯೊ ಒಲಿಂಪಿಕ್ಸ್‌ ಅರ್ಹತೆ ಸ್ಪರ್ಧೆಗೆ ತೆರಳಲು ಅನುಕೂಲವಾಗಲಿದೆ.

ಇದೇ ಏಪ್ರಿಲ್‌ ನಲ್ಲಿ ದಕ್ಷಿಣ ಕೊರಿಯಾದ ಚೆಂಗ್ಜುವಿನಲ್ಲಿ ಅರ್ಹತಾ ಸ್ಪರ್ಧೆಗಳು ನಡೆಯಲಿವೆ ಎಂದು ಆರ್‌ಎಫ್‌ಐ ಅಧ್ಯಕ್ಷೆ ರಾಜಲಕ್ಷ್ಮೀ ಸಿಂಗ್ ದೇವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT