ನಾಯಕ ಶುಭಮಯ್ ದಾಸ್ (43; 22 ಎ, 2 ಸಿ, 6 ಬೌಂ) ಅವರೊಂದಿಗೆ ಬ್ಯಾಟಿಂಗ್ ಆರಂಭಿಸಿದ ಸಹಾ ಏಳನೇ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಶತಕ ಪೂರೈಸಿದರು. ಅವರ ಇನಿಂಗ್ಸ್ನಲ್ಲಿ ಕೇವಲ ಎರಡು ಒಂಟಿ ರನ್ಗಳಿದ್ದವು. ನಾಲ್ಕು ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.