ಹಸಿರು ಪ್ರದೇಶ ನಾಶ: ಗೂಗಲ್‌ ಇಂಡಿಯಾಗೆ ನೋಟಿಸ್‌

7

ಹಸಿರು ಪ್ರದೇಶ ನಾಶ: ಗೂಗಲ್‌ ಇಂಡಿಯಾಗೆ ನೋಟಿಸ್‌

Published:
Updated:

ಗುರುಗ್ರಾಮ: ತನ್ನ ಕಚೇರಿ ಮುಂದಿರುವ ಹಸಿರು ಪ್ರದೇಶವನ್ನು ನಾಶಗೊಳಿಸಿ, ರಾಷ್ಟ್ರೀಯ ಹೆದ್ದಾರಿ 8ಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಿಕೊಂಡ ಆರೋಪದ ಮೇಲೆ ಇಲ್ಲಿರುವ ಗೂಗಲ್‌ ಇಂಡಿಯಾ ಸಂಸ್ಥೆಗೆ ಗುರುಗ್ರಾಮ ಮೆಟ್ರೋಪಾಲಿಟಿನ್‌ ಅಭಿವೃದ್ಧಿ ಪ್ರಾಧಿಕಾರ ನೋಟಿಸ್‌ ಜಾರಿ ಮಾಡಿದೆ.

ಹಸಿರು ಪ್ರದೇಶವನ್ನು ನಾಶಪಡಿಸಿ ರಸ್ತೆ ನಿರ್ಮಿಸಲು ಗೂಗಲ್‌ ಇಂಡಿಯಾ ಅನುಮತಿ ಪಡೆದಿರಲಿಲ್ಲ ಎಂದೂ ಪ್ರಾಧಿಕಾರ ಆಕ್ಷೇಪಿಸಿದೆ.

‘ಹಸಿರು ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ತೆರವುಗೊಳಿಸಿ, ರಸ್ತೆಯನ್ನು ಪುನಃ ನಿರ್ಮಿಸುವಂತೆ ಸೂಚಿಸಲಾಗಿದೆ. ಈ ಕಾರ್ಯಕ್ಕಾಗಿ ಗೂಗಲ್‌ಗೆ 12 ಗಂಟೆಗಳ ಗಡುವು ನೀಡಲಾಗಿದೆ’ ಎಂದು ಪ್ರಾಧಿಕಾರ ಹೆಚ್ಚುವರಿ ಸಿಇಒ ಎಂ.ಡಿ.ಸಿನ್ಹಾ ಹೇಳಿದ್ದಾರೆ.

ಆದರೆ, ಈ ಆರೋಪವನ್ನು ನಿರಾಕರಿಸಿರುವ ಗೂಗಲ್‌ ಇಂಡಿಯಾ, ‘ತನ್ನ ಕಚೇರಿ ಇರುವ ಕಟ್ಟಡ ರಿಯಲ್‌ ಎಸ್ಟೇಟ್‌ ಸಂಸ್ಥೆ ಯುನಿಟೆಕ್‌ಗೆ ಸೇರಿದ್ದು. ಈ ಸಂಸ್ಥೆಯೇ ರಸ್ತೆಯನ್ನು ನಿರ್ಮಿಸಿದೆ’ ಎಂದು ಉತ್ತರಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !