ಬುಧವಾರ, ಡಿಸೆಂಬರ್ 11, 2019
26 °C
ಹವಾಮಾನ ಬದಲಾವಣೆ ವಿರುದ್ಧ ವಿಶ್ವಬ್ಯಾಂಕ್‌ ಹೋರಾಟ

₹14 ಲಕ್ಷ ಕೋಟಿ ನೆರವು ಘೋಷಣೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Deccan Herald

ಕಟೊವೈಸ್‌, ಪೋಲಂಡ್‌: ಜಾಗತಿಕ ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ 2021 ರಿಂದ 2025ರ ಅವಧಿಯಲ್ಲಿ 14 ಲಕ್ಷ ಕೋಟಿ ನೆರವು ನೀಡಲಾಗುವುದು ಎಂದು ವಿಶ್ವಸಂಸ್ಥೆ ಘೋಷಿಸಿದೆ. ಪ್ರಸಕ್ತ ಈಗಿನ ಐದು ವರ್ಷಕ್ಕೆ ಹೋಲಿಸಿದರೆ, ನೆರವಿನ ಮೊತ್ತ ದ್ವಿಗುಣಗೊಂಡಿದೆ.

ಪೋಲಂಡ್‌ನಲ್ಲಿ 200 ರಾಷ್ಟ್ರಗಳ ವಿಶ್ವಸಂಸ್ಥೆ ತಾಪಮಾನ ಶೃಂಗಸಭೆ ನಡೆಯುತ್ತಿದ್ದು, ಈ ವೇಳೆ ಈ ಘೋಷಣೆ ಮಾಡಲಾಗಿದೆ. ಅತ್ಯಂತ ವ್ಯವಸ್ಥಿತವಾಗಿ ತಾಪಮಾನ ನಿಯಂತ್ರಿಸಿ, ಆ ಮೂಲಕ ಜನರಿಗೆ ಸಂದೇಶ ಕಳುಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

‘ತಾಪಮಾನ ನಿಯಂತ್ರಿಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸರ್ಕಾರ ಹಾಗೂ ಖಾಸಗಿ ಮೂಲಕ  2020ರ ಒಳಗಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ₹7 ಲಕ್ಷ ಕೋಟಿ ವ್ಯಯಿಸಲಿದೆ. ಕಳೆದೆರಡು ವರ್ಷಗಳಲ್ಲಿ ಇಷ್ಟೇ ಮೊತ್ತವನ್ನು ಖರ್ಚುಮಾಡಲಾಗಿದೆ’ ಎಂದು ಒಇಸಿಡಿ ಅಂಕಿಅಂಶಗಳಿಂದ ತಿಳಿದುಬಂದಿದೆ.

2012ರಿಂದ 2025ರ ತನಕ  ₹7 ಲಕ್ಷ ಕೋಟಿ ಮೊತ್ತವನ್ನು ವಿಶ್ವಬ್ಯಾಂಕ್‌ ನೇರವಾಗಿ ನೀಡಲಿದೆ, ಉಳಿಕೆಯ ಮೂರನೇ ಒಂದು ಭಾಗದಷ್ಟು ವಿಶ್ವಸಂಸ್ಥೆಯ ಇನ್ನೆರಡು ಸಂಸ್ಥೆಗಳು ಖಾಸಗಿ ಹೂಡಿಕೆ ಮೂಲಕ ಭರಿಸಲಿದೆ ಎಂದು ತಿಳಿಸಿದೆ.

‘ಮಾಲಿನ್ಯವನ್ನು ನಿಯಂತ್ರಿಸದಿದ್ದರೆ, 2030ರ ವೇಳೆಗೆ 10 ಕೋಟಿ ಮಂದಿ ಬಡತನದಲ್ಲಿ ಜೀವನ ದೂಡುವ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ವಿಶ್ವಸಂಸ್ಥೆಯ ಜಾಗತಿಕ ತಾಪಮಾನದ ನಿಯಂತ್ರಣದ ಹಿರಿಯ ನಿರ್ದೇಶಕ ಜಾನ್‌ ರೂಮೆ ಅವರು ಇದೇ ವೇಳೆ ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು