ಅಫ್ಗನ್ ಗ್ರಂಥಾಲಯಕ್ಕೆ ಅನುದಾನ: ಮೋದಿ ಕುರಿತು ಟ್ರಂಪ್ ವ್ಯಂಗ್ಯವೇನು ಗೊತ್ತೇ?

7

ಅಫ್ಗನ್ ಗ್ರಂಥಾಲಯಕ್ಕೆ ಅನುದಾನ: ಮೋದಿ ಕುರಿತು ಟ್ರಂಪ್ ವ್ಯಂಗ್ಯವೇನು ಗೊತ್ತೇ?

Published:
Updated:

ವಾಷಿಂಗ್ಟನ್: ‘ಆ ಗ್ರಂಥಾಲಯವನ್ನು ಅಫ್ಗಾನಿಸ್ತಾನದಲ್ಲಿ ಯಾರು ಬಳಸುತ್ತಾರೋ ನನಗೊತ್ತಿಲ್ಲ. ಆದರೂ ಅದಕ್ಕೆ ಅನುದಾನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಬೇಕಾಯಿತು’. ಅಫ್ಗಾನಿಸ್ತಾದ ಗ್ರಂಥಾಲಯಕ್ಕೆ ಅನುದಾನ ನೀಡಿದ್ದೇವೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಂಗ್ಯವಾಡಿದ ಪರಿಯಿದು.

ಸಾಗರೋತ್ತರ ಹೂಡಿಕೆ ಕಡಿಮೆ ಮಾಡುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಸಂದರ್ಭದಲ್ಲಿ ಸಚಿವಸಂಪುಟ ಸಭೆಯೊಂದರಲ್ಲಿ ಮೋದಿ ಕುರಿತು ಟ್ರಂಪ್ ಆಡಿರುವ ವ್ಯಂಗ್ಯದ ಮಾತು ಈಗ ಬಹಿರಂಗವಾಗಿದೆ. ಆದರೆ, ಅದು ಯಾವ ಯೋಜನೆಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಎಂಬುದು ತಿಳಿದುಬಂದಿಲ್ಲ. 

ಮೋದಿ ಜತೆಗಿನ ಮಾತುಕತೆ ಬಗ್ಗೆ ವಿವರಣೆ ನೀಡಿದ ಟ್ರಂಪ್, ‘ಆ ನಾಯಕರು ಪದೇಪದೇ ಆಫ್ಗಾನಿಸ್ತಾನದಲ್ಲಿ ಗ್ರಾಂಥಾಲಯ ಕಟ್ಟಿಸಿದ್ದೇನೆ ಎಂದು ಹೇಳುತ್ತಿದ್ದರು. ಅಂದರೆ ಏನೆಂದು ನಿಮಗೆ ಗೊತ್ತಾಯಿತೇ?  ಆ ರೀತಿ ಐದು ಗಂಟೆ ನಾವು ಕಳೆದೆವು. ಮತ್ತು ಗ್ರಂಥಾಲಯಕ್ಕಾಗಿ ಧನ್ಯವಾದ ಎಂದು ನಾವು ಹೇಳಬೇಕಾಯಿತು. ಅದನ್ನು ಅಫ್ಗಾನಿಸ್ತಾನದಲ್ಲಿ ಯಾರು ಬಳಸುತ್ತಾರೋ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

2001ರ ಸೆಪ್ಟೆಂಬರ್‌ 11ರಂದು ಅಮೆರಿಕದಲ್ಲಿ ನಡೆದಿದ್ದ ಭೀಕರ ಭಯೋತ್ಪಾದಕ ದಾಳಿಯ ಬಳಿಕ ಆಫ್ಗಾನಿಸ್ತಾನದಲ್ಲಿ ತೀವ್ರವಾದಿ ತಾಲಿಬಾನ್ ಆಡಳಿತವನ್ನು ಅಮೆರಿಕದ ಪಡೆಗಳು ಅಂತ್ಯಗೊಳಿಸಿದ್ದವು. ಆ ನಂತರ ಭಾರತವು ಆಫ್ಗಾನಿಸ್ತಾನಕ್ಕೆ ಹಣಕಾಸು ನೆರವು ನೀಡುತ್ತಿದೆ. ಆಫ್ಗನ್‌ಗೆ 3 ಶತಕೋಟಿ ಡಾಲರ್ ನೆರವು ನೀಡುವ ಬಗ್ಗೆ ಭಾರತ ಬದ್ಧವಾಗಿದ್ದು, ಕಾಬುಲ್‌ನ ಶಾಲೆಯ ಪುನರ್‌ನಿರ್ಮಾಣ ಮತ್ತು ಆಫ್ಗನ್‌ನ ಸಾವಿರ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಅಧ್ಯಯನ ನಡೆಸಲು ಪ್ರತಿವರ್ಷ ವಿದ್ಯಾರ್ಥಿವೇತನ ನೀಡುವ ಯೋಜನೆಯೂ ಇದರಲ್ಲಿ ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 14

  Happy
 • 8

  Amused
 • 2

  Sad
 • 3

  Frustrated
 • 5

  Angry

Comments:

0 comments

Write the first review for this !