ಜಿಲ್ಲಾ ಮಟ್ಟದ ವಿಜ್ಞಾನ ಗೋಷ್ಠಿ
ಗುಲ್ಬರ್ಗ: ಜಿಲ್ಲೆಯ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ವಿಜ್ಞಾನ ಗೋಷ್ಠಿಯನ್ನು ಅಗಸ್ಟ್ ಎರಡನೇ ವಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದ ಆಶ್ರಯದಲ್ಲಿ ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ವಿಜ್ಞಾನ ಅಧಿಕಾರಿ ಸಿ.ಎನ್. ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಈ ಬಾರಿ `ಭಾರತದಲ್ಲಿ ಗಣಿತಶಾಸ್ತ್ರ- ಅದರ ಇತಿಹಾಸ, ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯ~ ಕುರಿತು ವಿಜ್ಞಾನ ಗೋಷ್ಠಿ ನಡೆಸಲಾಗುತ್ತಿದೆ. ಗೋಷ್ಠಿಯಲ್ಲಿ 8ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಯ ಒಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿ ಭಾಗವಹಿಸಬಹುದು.
ಆಸಕ್ತಿಯುಳ್ಳ ವಿದ್ಯಾರ್ಥಿಗಳು ತಮ್ಮ ಹೆಸರು, ಓದುತ್ತಿರುವ ಶಾಲೆಯ ಮೂಲಕ ನೋಂದಾಯಿಸಿಕೊಳ್ಳಬಹುದು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮೂರು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿ ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತಾನೆ.
ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ವಿಜೇತರಾದ ಒಬ್ಬ ಸ್ಪರ್ಧಾಳು ಅಕ್ಟೋಬರ್ 5ರಂದು ಬಿರ್ಲಾ ಔದ್ಯೋಗಿಕ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಕಲ್ಕತ್ತಾದಲ್ಲಿ ನಡೆಯುವ ರಾಷ್ಟ್ರಮಟ್ಟದ ವಿಜ್ಞಾನ ಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶವಿರುತ್ತದೆ.
ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗೆ ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ ವತಿಯಿಂದ ಒಂದು ವರ್ಷದವರೆಗೆ ರೂ. 2ಸಾವಿರ ಶಿಷ್ಯವೇತನ ನೀಡಲಾಗುವುದು. ಗೋಷ್ಠಿ ಮಂಡಸಿ 2ರಿಂದ 10ನೇ ಸ್ಥಾನ ಪಡೆದ 9 ವಿದ್ಯಾರ್ಥಿಗಳಿಗೆ ಒಂದು ವರ್ಷದವರೆಗೆ ಒಂದು ಸಾವಿರ ಶಿಷ್ಯವೇತನ ನೀಡಲಾಗುವುದು ಎಂದು ಹೇಳಿದ್ದಾರೆ.
ನಾಳೆ ಉಚಿತ ಹೋಮಿಯೊಪಥಿ ಚಿಕಿತ್ಸಾ ಶಿಬಿರ
ಗುಲ್ಬರ್ಗ: ನಗರದ ಲಾಲಗೇರಿ ಕ್ರಾಸ್ನಲ್ಲಿರುವ `ನಂದಿ ಹೋಮಿಯೊಪಥಿ ಕ್ಲಿನಿಕ್~ನಲ್ಲಿ ಇದೇ 8ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಉಚಿತ ಹೋಮಿಯೊಪಥಿ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸ್ಪಾಂಡಿಲೋಸಿಸ್, ಸಯಾಟಿಕಾ, ಸೊಂಟನೋವು, ಕುತ್ತಿಗೆ ನೋವು, ಸ್ಪಾಂಡಿಲೈಟಿಸ್, ಕೈಕಾಲು ಹರಿಯುವುದು, ಡಿಸ್ಕ್ ಪ್ರೊಲಾಪ್ಸ್, ಸಂಧಿವಾತ, ಸ್ಥೂಲಕಾಯ, ಚರ್ಮರೋಗ, ಎಕ್ಜಿಮಾ, ಸೋರಿಯಾಸಿಸ್, ಡರ್ಮಾಟೈಟಿಸ್, ತೊನ್ನು, ಅಲರ್ಜಿ, ಆಸ್ತಮಾ, ಉಬ್ಬಸ ಬರುವುದು ಹಾಗೂ ಸೈನಸೈಟಿಸ್ ರೋಗಗಳಿಗೆ ಶಿಬಿರದಲ್ಲಿ ಚಿಕಿತ್ಸೆ ಕೊಡಲಾಗುವುದು.
ದೇಹದಲ್ಲಿರುವ ರಾಸಾಯನಿಕ ಕ್ರಿಯೆಗಳನ್ನು ಪುನಶ್ಚೇತನಗೊಳಿಸಿ, ಆರೋಗ್ಯ ವೃದ್ಧಿಸುವ ಹಾಗೂ ಅಡ್ಡ ಪರಿಣಾಮರಹಿತ ಚಿಕಿತ್ಸೆಯು ಇದಾಗಿದೆ. ಹೋಮಿಯೊಪಥಿಕ್ ವೈದ್ಯ ಡಾ ಶರಣ್ ಎಸ್. ಕಂಠಿ ಅವರ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದ್ದು, ಸಾರ್ವಜನಿಕರ ಇದರ ಪ್ರಯೋಜನ ಪಡೆಯಲು ಮನವಿ ಮಾಡಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.