ಶುಕ್ರವಾರ, ಏಪ್ರಿಲ್ 16, 2021
31 °C

ಬಮಲಿಂಗೇಶ್ವರ ಬೃಹ್ಮನ ಮಠದ ಸಮುದಾಯ ಭವನಕ್ಕೆ 10ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇಕಾರರ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಭರವಸೆ

`ಸಮುದಾಯ ಭವನಕ್ಕೆ 10 ಲಕ್ಷ~

ಅಫಜಲಪುರ: ಶ್ರೀಗುರು ಬಮಲಿಂಗೇಶ್ವರ ಬೃಹ್ಮನ ಮಠದ ಸಮುದಾಯ ಭವನಕ್ಕೆ 10ಲಕ್ಷ ರೂಪಾಯಿ ನೀಡುವುದಾಗಿ ರಾಜ್ಯ ನೇಕಾರರ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಡಿ. ಲಕ್ಷ್ಮೀ ನಾರಾಯಣ ಭರವಸೆ ನೀಡಿದರು.ತಾಲ್ಲೂಕಿನ ರೇವೂರ (ಬಿ) ಗ್ರಾಮದಲ್ಲಿ ಶ್ರೀಗುರು ಬಮಲಿಂಗೇಶ್ವರ ಬೃಹ್ಮನ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತಭಾನುವಾರ ಏರ್ಪಡಿಸಿದ, ಜಂಗಮ ಸಂತೃಪ್ತಿ, ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಯಕದ ಮೂಲಕ ಜನ ಸೇವೆ ಮಾಡಬೇಕು. ಪರೋಪಕಾರಿಯಾಗಿ ಬಾಳಬೇಕು, ಮಠಮಂದಿರಗಳು ಅಭಿವೃದ್ಧಿಯಾಗಬೇಕಾದರೆ ರಾಜಕೀಯ ಸಹಾಯ ಸಹಕಾರಬೇಕು. ಆದರೆ ಧರ್ಮದಲ್ಲಿ ರಾಜಕೀಯ ಬೆರಸಬಾರದು. ಬೃಹ್ಮನ ಮಠದ ಸಮುದಾಯ ಭವನಕ್ಕೆ ನನ್ನ ವಿಧಾನ ಪರೀಷತ್ ಸದಸ್ಯರ ಅನುದಾನದಲ್ಲಿ 10ಲಕ್ಷ ರೂಪಾಯಿ ನೀಡುತ್ತೇನೆ ಸಮುದಾಯ ಭವನದಿಂದ ಕಾರ್ಯಕ್ರಮಗಳು ಮಾಡಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.ಶಾಸಕ ಮಾಲೀಕಯ್ಯ ಮಾತನಾಡಿ ಸುವರ್ಣ ಗ್ರಾಮದ ಯೋಜನೆಯಲ್ಲಿ ಬೃಹ್ಮನ ಮಠದಲ್ಲಿ ಸಮುದಾಯ ಭವನ ಕಟ್ಟಲು 4ಲಕ್ಷ ರೂಪಾಯಿ ನೀಡಲಾಗಿದೆ. ಮುಂದೆಯೂ ಸಹ ರೇವೂರ (ಬಿ), ರೇವೂರ(ಕೆ) ಸೇರಿದಂತೆ ಸುತ್ತಮುತ್ತಲಿನ 5 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಶಾಶ್ವತ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.ರಾಜ್ಯದಲ್ಲಿ ಬರಗಾಲ ಇರುವುದರಿಂದ ರಾಷ್ಟ್ರೀಯ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡಲು ಈಗಾಗಲೇ ರಾಜ್ಯದ ಕಾಂಗ್ರೆಸ ನಾಯಕರು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ ಎಂದು ತಿಳಿಸಿದ ಅವರು ಧರ್ಮದಲ್ಲಿ ರಾಜಕೀಯ ಸೇರಿಸಿದವರು ಬಿಜೆಪಿಯವರೇ ಎಂದು ಹೇಳಿದರು.ಬೃಹ್ಮನ ಮಠದ ಶ್ರೀಕಂಠ ಶಿವಾಚಾರ್ಯರು ಮಾತನಾಡಿ, ನಮ್ಮ ಮಠಕ್ಕೆ ಇನ್ನೂವರೆಗೂ ಯಾವ ಸರ್ಕಾರಗಳು ಅನುದಾನ ನೀಡಿಲ್ಲ ಭಕ್ತರಿಂದಲೇ ಈ ಮಠವನ್ನು ಬೆಳೆಸಲಾಗಿದೆ ಎಂದರು.ಮಾದನ ಹಿಪ್ಪರಗಾ ಮಠದ ಶಿವಕುಮಾರ ಸ್ವಾಮಿ ಕರಬಂಟನಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಸಿದ್ಧಾರ್ಥ ಬಸರಿಗಿಡದ, ತಾ.ಪಂ.ಸದಸ್ಯರಾದ ಶಿವಪುತ್ರಪ್ಪ ಗೌಡಂಗಾವ್,ನಂದಿನಿ ಕುಂಬಾರ ಹಾಗೂ ಮುಖಂಡರಾದ ಸೂರ್ಯಕಾಂತ ನಾಕೇದಾರ, ಸಿದ್ದಣ ಗೌಡ ಪಾಟೀಲ,ಸಿದ್ದು ಹಳೆಗೂಧಿ, ಗೋವಿಂದ ಭಟ್, ಚಂದಮ್ಮ ಎಸ್ ಪಾಟೀಲ,ಗುರಬಾಳಪ್ಪ ಜಕಾಪುರೆ,ವಿಶ್ವನಾಥ ಚಾಕೂತೆ, ಮಾಂತೇಶ ಪಾಟೀಲ, ಪ್ರಸನ್‌ಕುಮಾರ ಶೇಟೆ ಮುಂತಾದವರು ಭಾಗವಹಿಸಿದ್ದರು. ಮಲ್ಲಿನಾಥ ಕುಂಬಾರ ಸ್ವಾಗತಿಸಿದರು. ಸುರಗೇಶ ಸ್ವಾಮಿಗಳು ನಿರೂಪಿಸಿದರು. ಶ್ರೀಮಂತ ಕುಂಬಾರ ವಂದಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.