ಯುವ ಕಾಂಗ್ರೆಸ್ ಸಹಾಯಹಸ್ತ ಸಪ್ತಾಹ

7

ಯುವ ಕಾಂಗ್ರೆಸ್ ಸಹಾಯಹಸ್ತ ಸಪ್ತಾಹ

Published:
Updated:

ಗುಲ್ಬರ್ಗ: ಯುವ ಕಾಂಗ್ರೆಸ್ ಸಹಾಯಹಸ್ತ ಸಪ್ತಾಹದ ಅಂಗವಾಗಿ ಡಿ. 1ರಿಂದ 3ರವರೆಗೆ ಗುಲ್ಬರ್ಗ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಎಲ್ಲ ತಾಲ್ಲೂಕು ಕಚೇರಿ ಎದುರು ಸಹಾಯಹಸ್ತ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.ತಾಲ್ಲೂಕು ಕಚೇರಿಗಳಲ್ಲಿ ಅಲೆದಾಡುವಂತೆ ಮಾಡುವುದನ್ನು ತಡೆಗಟ್ಟಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದ ವಿಳಂಬ ನೀತಿಯಿಂದ ಜನ ಬೇಸತ್ತು ಹೋಗಿದ್ದಾರೆ. ಇದೇ ಮೊದಲಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆಂತರಿಕ ಕಚ್ಚಾಟದಲ್ಲೇ ಕಾಲ ಕಳೆಯುತ್ತಿದೆ ಎಂದು ಗುಲ್ಬರ್ಗ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಬಂಡಪ್ಪ ಡಿ. ಲೇಂಗಟಿ ಆರೋಪಿಸಿದರು.ಬಿಜೆಪಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸುಮ್ಮನೆ ಕುಳಿತರೆ ಪ್ರಯೋಜನವಾಗುವುದಿಲ್ಲ. ಎಲ್ಲರೂ ಸೇರಿ ಹೋರಾಟದ ಮೂಲಕ ಹಕ್ಕು ಪಡೆಯಬೇಕೆಂದು ಅವರು ಕರೆನೀಡಿದರು. ಉಪಾಧ್ಯಕ್ಷ ಸಂಜು ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೇವಣಸಿದ್ದ ಅವರಾದ,  ಮಂಜುನಾಥ ಜಂಬಗಾ, ಸಿದ್ಧಾರ್ಥ ಕೋರವಾರ, ಮಂಜುನಾಥ ಲೇಂಗಟಿ, ಶರಣಗೌಡ, ಮಹಾಂತೇಶ ಪಾಟೀಲ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry