ತೊಗರಿ ಮಂಡಳಿಗೆ 100ಕೋಟಿ ನೀಡಲು ಮನವಿ

7

ತೊಗರಿ ಮಂಡಳಿಗೆ 100ಕೋಟಿ ನೀಡಲು ಮನವಿ

Published:
Updated:

ಗುಲ್ಬರ್ಗ: ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ 5ಸಾವಿರ ರೂಪಾಯಿ ದರವನ್ನು ನಿಗದಿ ಮಾಡುವುದು ಹಾಗೂ ಹೈದರಾಬಾದ್ ಕರ್ನಾಟಕ ತೊಗರಿ ಮಂಡಳಿಗೆ ನಿರ್ವಹಣಗೆ 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವುದು ಮತ್ತು ಗುಲ್ಬರ್ಗವನ್ನು ಸ್ಮಾರ್ಟ್ ಸಿಟಿ ನಗರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ನೇತೃತ್ವದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಬೆಳಗಾವಿಯಲ್ಲಿ ಮನವಿ ಸಲ್ಲಿಸಲಾಯಿತು.ಸಭೆಯಲ್ಲಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕೃಷಿ ಸಚಿವ ಉಮೇಶ ಕತ್ತಿ, ಸಚಿವ ರೇವೂನಾಯಕ್ ಬೆಳಮಗಿ, ರಾಜುಗೌಡ, ಎಸ್.ಕೆ. ಬೆಳ್ಳುಬ್ಬಿ, ಶಾಸಕರಾದ ಡಾ. ಶರಣಪ್ರಕಾಶ ಪಾಟೀಲ, ಮಾಲೀಕಯ್ಯ ಗುತ್ತೇದಾರ, ಅಮರನಾಥ ಪಾಟೀಲ, ಬಿ.ಆರ್. ಪಾಟೀಲ, ಬಸವರಾಜ ಇಂಗಿನ್, ಮಾರುತಿ ಮಾನ್ಪಡೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋಯಾಂಕ, ಲಕ್ಷೀಕಾಂತ ಮೈಲಾಪುರ, ಬಸವರಾಜ ಹಡಗಿಲ ಸೇರದಂತೆ ಹಲವರು  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry