385 ಜನರ ಕಣ್ಣಿನ ಉಚಿತ ತಪಾಸಣೆ

7

385 ಜನರ ಕಣ್ಣಿನ ಉಚಿತ ತಪಾಸಣೆ

Published:
Updated:

ಗುಲ್ಬರ್ಗ: ಚಿತ್ತಾಪುರ ತಾಲ್ಲೂಕಿನ ರಾವೂರ್ ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ವಿದ್ಯಾ ಸಂಸ್ಥೆಯಲ್ಲಿ  ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆ ಹಾಗೂ ಜರ್ಮನಿಯ ಹಮಾರ್ ಬಂಧನ ಸ್ವಯಂ ಸೇವಾ ಸಂಸ್ಥೆಯ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 385 ಜನರ ನೇತ್ರ ತಪಾಸಣೆ ಮಾಡಿ, ಸೂಕ್ತವಾದ ಚಿಕಿತ್ಸೆ ನೀಡಲಾಯಿತು  ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಎನ್. ಪಾಟೀಲ ಹಾಗೂ ನೇತ್ರ ಚಿಕಿತ್ಸಾ ಶಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ. ಆರ್. ಪೂಜಾರ ತಿಳಿಸಿದ್ದಾರೆ.ಸುಮಾರು 60 ಬಡ ಕುಟುಂಬದ ಹಿರಿಯ ನಾಗರೀಕರ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಬಸವೇಶ್ವರ ಆಸ್ಪತ್ರೆಯಲ್ಲಿ ನೆರವೇರಿಸಿ ಕೃತ್ರಿಮ ಮಸೂರ ಅಳವಡಿಸಲಾಯಿತು ಎಂದು ತಿಳಿಸಿದ್ದಾರೆ.

ಬಹುತೇಕ ಫಲಾನುಭವಿಗಳು ಅನೇಕ ವರ್ಷಗಳಿಂದ ದೃಷ್ಟಿದೋಷ ತೊಂದರೆ ಅನುಭವಿಸುತ್ತಿದ್ದರು. ಅದರಲ್ಲಿ 10 ಫಲಾನುಭವಿಗಳು ಒಂದು ಕಣ್ಣಿನ ದೃಷ್ಟಿಯನ್ನು ಕಾಯಂ ಆಗಿ ಕಳೆದುಕೊಂಡಿದ್ದರು. ಎಲ್ಲರ ಮನವೊಲಿಸಿ ಅಗತ್ಯ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ. ಭೀಮಾಶಂಕರ ಸಿ. ಬಿಲಗುಂದಿ  ಶಸ್ತ್ರಚಿಕಿತ್ಸೆಗೆ ಒಳಗಾದ ಎಲ್ಲ ಫಲಾನುಭವಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಉಚಿತ ಕನ್ನಡಕ ಹಾಗೂ ಕಣ್ಣಿನ ಔಷಧ ವಿತರಣೆ ಮಾಡಿದರು.ಡಾ. ವಿಶ್ವನಾಥ ರೆಡ್ಡಿ, ಡಾ. ರಾಜಶ್ರೀ ರೆಡ್ಡಿ, ಡಾ. ಸಂತೋಷ ಪಾಟೀಲ, ಡಾ.ಪ್ರಜ್ವಲ್ ರೆಡ್ಡಿ, ಡಾ. ಸುಮಿತ ದೇಶಪಾಂಡೆ, ಡಾ.ಕವಿತಾ ಸಲಗರ, ಡಾ. ಮಂಜುಳಾ ಮಂಗಾಣಿ ಮೊದಲಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry