ಹೈ-ಕ ಜನತೆ ಹಿಂದುಳಿದವರಲ್ಲ: ನ್ಯಾ. ಗೋಪಾಲಗೌಡ

7

ಹೈ-ಕ ಜನತೆ ಹಿಂದುಳಿದವರಲ್ಲ: ನ್ಯಾ. ಗೋಪಾಲಗೌಡ

Published:
Updated:

ಗುಲ್ಬರ್ಗ: `ಹೈದರಾಬಾದ್ ಕರ್ನಾಟಕದ ಜನತೆ ಹಿಂದುಳಿದವರಲ್ಲ. ಬಹಳ ಪ್ರಜ್ವಲತೆ, ಒಳ್ಳೆಯ ಬುದ್ಧಿ, ಮೃದು ಮನಸ್ಸು ಹೊಂದಿರುವ, ಹೃದಯವಂತರು. ಉತ್ತಮ ಪ್ರಜೆಗಳಾಗ ಬೇಕು ಎಂದು ಕನಸು ಕಾಣುವವರು' ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.ನಗರದ ಸರ್ವಜ್ಞ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಜಸ್ಟೀಸ್ ಶಿವರಾಜ ಪಾಟೀಲ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ಆಶ್ರಯದಲ್ಲಿ ಶನಿವಾರ ನಡೆದ  `ವಿದ್ಯಾರ್ಥಿಗಳ ಜೊತೆ ಕೆಲಹೊತ್ತು' ಕಾರ್ಯಕ್ರಮದಲ್ಲಿ ಮಾತನಾಡಿದರು.ಶತಮಾನಗಳಿಂದ ಲಿಂಗ ಶೋಷಣೆಗೆ ಒಳಗಾದ ಮಹಿಳೆಯರು ಇಂದು ಉತ್ತಮ ಶಿಕ್ಷಣ ಪಡೆದು, ಶೋಷಣೆ ಹೋಗಲಾಡಿಸುತ್ತಿದ್ದಾರೆ.12ನೇ ಶತಮಾನದ ಬಸವಾದಿ ಶರಣರು ಈ ನೆಲದಲ್ಲಿ ಸಮಾನತೆಯ ಬೀಜವನ್ನು ಬಿತ್ತಿದ ಫಲವಾಗಿಯೇ ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ತಮ್ಮ ಬಾಲ್ಯ ಜೀವನ ನೆನಪಿಸಿಕೊಂಡ ಅವರು, ತಾವು ಕಷ್ಟಪಟ್ಟು ನ್ಯಾಯಾಮೂರ್ತಿಯಾದ ಸಮಯವನ್ನು ಸ್ಮರಿಸಿಕೊಂಡರು. ನೀವು ಕಷ್ಟಪಟ್ಟು ದೇಶದ ಸಂಪತ್ತಾಗಿ. ಬಡವರಿಗೆ ದೀನ ದಲಿತರಿಗೆ ನೆರವಾಗಿ. ದೇಶದ ಬಡತನ ನಿವಾರಿಸಿ. ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮೃದ್ಧ, ಬಲಿಷ್ಠ ದೇಶ ಕಟ್ಟಿರಿ. ಹಾಗೆಯೇ ಉನ್ನತ ಹುದ್ದೆಗಳನ್ನು ಹೊಂದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಸರ್ವಜ್ಞ ಕಾಲೇಜಿನ ಸಂಸ್ಥಾಪಕ ಪ್ರೊ. ಚೆನ್ನಾರೆಡ್ಡಿ ಪಾಟೀಲ, ಸಂಸ್ಥೆ ಅಧ್ಯಕ್ಷೆ ಗೀತಾ ಚೆನ್ನಾರೆಡ್ಡಿ ಪಾಟೀಲ, ಹಿರಿಯ ವಕೀಲ ವಿಲಾಸಕುಮಾರ, ಗೌರೀಶ ಖಾಸೆಂಪೂರ, ಮಹಮ್ಮದ್ ಬಿನ್ ಅಲಿ, ಚನ್ನಬಸಪ್ಪ ಮುಧೋಳ, ಪ್ರಾಚಾರ್ಯ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry