ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC T20 World Cup: ವಿಂಡೀಸ್ ತಂಡಕ್ಕೆ ಪೊವೆಲ್ ನಾಯಕ

Published 3 ಮೇ 2024, 15:54 IST
Last Updated 3 ಮೇ 2024, 15:54 IST
ಅಕ್ಷರ ಗಾತ್ರ

ಪೋರ್ಟ್ ಆಫ್‌ ಸ್ಪೇನ್: ರಾಜಸ್ಥಾನ ರಾಯಲ್ಸ್ ತಂಡದ ಸ್ಫೋಟಕ ಶೈಲಿಯ ಬ್ಯಾಟರ್ ರೋವ್ಮನ್ ಪೊವೆಲ್ ಅವರು ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳಲ್ಲಿ ಮಿಂಚುತ್ತಿರುವ ವಿಂಡೀಸ್ ಆಟಗಾರರು ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿರುವ ಯುವವೇಗಿ ಶಾಮರ್ ಜೋಸೆಫ್ ಅವರಿಗೆ ಅವಕಾಶ ಲಭಿಸಿದೆ. ನಿಕೊಲಸ್ ಪೂರನ್, ರೊಮಾರಿಯೊ ಶೇಫರ್ಡ್‌ ಕೂಡ ಇದ್ದಾರೆ. ಅಲ್ಲದೇ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಆರ್‌ಸಿಬಿಯಲ್ಲಿರುವ ಅಲ್ಝರಿ ಜೋಸೆಫ್‌ ಸಹ ತಂಡದಲ್ಲಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿಯು ವಿಂಡೀಸ್ ಮತ್ತು ಅಮೆರಿಕ ಜಂಟಿ ಸಹಭಾಗಿತ್ವದಲ್ಲಿ ನಡೆಯಲಿದೆ. 

ತಂಡ: ರೋವ್ಮನ್ ಪೊವೆಲ್ (ನಾಯಕ), ಅಲ್ಝರಿ ಜೋಸೆಫ್, ಜಾನ್ಸನ್ ಚಾರ್ಲ್ಸ್‌, ರಾಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹುಸೇನ್, ಶಾಮರ್ ಜೋಸೆಫ್, ಬ್ರೆಂಡನ್ ಕಿಂಗ್ (ವಿಕೆಟ್‌ಕೀಪರ್), ಗುಡಕೇಶ್ ಮೋತಿ, ನಿಕೊಲಸ್ ಪೂರನ್, ಆ್ಯಂಡ್ರೆ ರಸೆಲ್, ಶೆರ್ಫೆನ್ ರುದರ್ಫೋರ್ಡ್, ರೊಮಾರಿಯೊ ಶೇಫರ್ಡ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT