ಚಾಮರಾಜನಗರ: ಕಂದಕಕ್ಕೆ ಉರುಳಿದ ಬಸ್‌, ಇಬ್ಬರ ಸಾವು

7
ದಿಂಬಮ್‌ನಲ್ಲಿ ಘಟನೆ, ಅತಿವೇಗದ ಚಾಲನೆ ಕಾರಣ, 21 ಜನರಿಗೆ ಗಾಯ

ಚಾಮರಾಜನಗರ: ಕಂದಕಕ್ಕೆ ಉರುಳಿದ ಬಸ್‌, ಇಬ್ಬರ ಸಾವು

Published:
Updated:
Deccan Herald

ಚಾಮರಾಜನಗರ: ಮೈಸೂರಿನಿಂದ ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಈರೋಡ್‌ಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ದಿಂಬಮ್‌ ಘಾಟಿಯಲ್ಲಿ ಶುಕ್ರವಾರ ರಾತ್ರಿ ಕಂದಕಕ್ಕೆ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. 21 ಜನರು ಗಾಯಗೊಂಡಿದ್ದಾರೆ.

ಈರೋಡ್‌ ನಿವಾಸಿಗಳಾದ ಮುತ್ತು (65) ಮತ್ತು ಗುರುಸ್ವಾಮಿ (55) ಮೃತಪಟ್ಟವರು. ಘಾಟಿಯ 26ನೇ ತಿರುವಿನಲ್ಲಿ ಬಸ್‌ 50ರಿಂದ 55 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ತುಂತುರು ಮಳೆ‌ಯೂ ಬರುತ್ತಿತ್ತು. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.

ಬಸ್‌ ಸಂಜೆ 6.30ಕ್ಕೆ ಮೈಸೂರಿನಿಂದ ಹೊರಟಿತ್ತು. 8 ಗಂಟೆಗೆ ಚಾಮರಾಜನಗರ ತಲುಪಿ, ಇಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಈರೋಡ್‌ನತ್ತ ತೆರಳಿತ್ತು.

ತಮಿಳುನಾಡು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, 21 ಮಂದಿ ಗಾಯಾಳುಗಳನ್ನು ಸತ್ಯಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ 18 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಈರೋಡ್‌ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನ ಹೊಸನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !