ಪರಸ್ಪರ ಸಹಯೋಗ: ಖರ್ಗೆ ಸಲಹೆ

ಸೋಮವಾರ, ಮೇ 20, 2019
30 °C

ಪರಸ್ಪರ ಸಹಯೋಗ: ಖರ್ಗೆ ಸಲಹೆ

Published:
Updated:

ಗುಲ್ಬರ್ಗ: ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳು ಪರಸ್ಪರ ಸಹಯೋಗದೊಂದಿಗೆ ಯೋಜನೆ ರೂಪಿಸಬೇಕು ತೆಗೆದುಕೊಳ್ಳಬೇಕು ಎಂದು ಭಾರತ ಸಲಹೆ ಮಾಡಿದೆ.ಟರ್ಕಿ ದೇಶದ ಇಸ್ತಾಂಬುಲ್‌ನಲ್ಲಿ ಇದೇ 11ರಿಂದ ಆರಂಭವಾಗಿರುವ `ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆ~ ಕುರಿತ ಐದು ದಿನಗಳ 14ನೇ ಜಾಗತಿಕ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಲಸದ ಸ್ಥಳದಲ್ಲಿ ಕಾರ್ಮಿಕರ ಸುರಕ್ಷತೆ ಬಗ್ಗೆ ಭಾರತದಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಜಾಗತೀಕರಣ, ತಂತ್ರಜ್ಞಾನ ವರ್ಗಾವಣೆ ಹಾಗೂ ಹೊರಗುತ್ತಿಗೆಯಂಥ ನೀತಿಗಳು ಕಾರ್ಮಿಕರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿವೆ. ಉದ್ಯೋಗದ ಸ್ಥಳದಲ್ಲಿ ಅಪಾಯ ಸಂಭವಿಸುವುದನ್ನು ತಡೆಯುವ ನಿಟ್ಟಿನಲ್ಲಿ ಸಿಯೋಲ್ ಘೋಷಣೆ-2008 ಒಂದು ಮಹತ್ವಪೂರ್ಣ ಸಾಧನೆ ಎಂದು ಬಣ್ಣಿಸಿದರು.“ಸಿಯೋಲ್ ಘೋಷಣೆಯನ್ನು ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯ ಹೆಚ್ಚಾಗಿದೆ. ಕೆಲಸದಲ್ಲಿ ಸುರಕ್ಷತೆ ಹಾಗೂ ಸ್ವಚ್ಛ ಪರಿಸರದ ಹೊರತಾಗಿ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಬೆಳವಣಿಗೆ ಅಸಾಧ್ಯ ಎಂಬುದನ್ನು ಭಾರತ ಬಲವಾಗಿ ನಂಬಿದೆ” ಎಂದು ಹೇಳಿದ ಸಚಿವ ಖರ್ಗೆ, ಸುರಕ್ಷತೆ ಮತ್ತು ಆರೋಗ್ಯವನ್ನು ಮಾನವನ ಮೂಲಭೂತ ಹಕ್ಕು ಎಂದೇ ಪರಿಗಣಿಸಲಾಗಿದೆ ಎಂದರು.ಕಾರ್ಮಿಕರ ಅಂತರರಾಷ್ಟ್ರೀಯ ನಿಯಮಗಳನ್ನು ಭಾರತ ಕರಾರುವಾಕ್ಕಾಗಿ ಪಾಲಿಸುತ್ತಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಸಮಾವೇಶದಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳನ್ನೂ ಅನುಷ್ಠಾನ ಮಾಡುತ್ತಿದೆ ಎಂದು ಹೇಳಿದ ಸಚಿವರು, ಜಾಗೃತಿ ಮೂಡಿಸುವುದು, ಸಂಶೋಧನೆ, ತಂತ್ರಜ್ಞಾನ ವಿನಿಮಯ ಇತರ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಸಹಯೋಗಕ್ಕೆ ಎಲ್ಲ ದೇಶಗಳೂ ಮುಂದಾಗಬೇಕು ಎಂದು ಮನವಿ ಮಾಡಿದರು.ಜಗತ್ತಿನ ಎಲ್ಲ ದೇಶಗಳ ಕಾರ್ಮಿಕ ಸಚಿವರು ಪಾಲ್ಗೊಂಡಿರುವ ಈ ಸಮಾವೇಶದಲ್ಲಿ ಐಎಲ್‌ಒ ಕಾರ್ಯಕಾರಿ ನಿರ್ದೇಶಕ ಅಸ್ಸಾನೆ ಡಿಯೊಪ್, ಅಂತರರಾಷ್ಟ್ರೀಯ ಸಾಮಾಜಿಕ ಭದ್ರತಾ ಒಕ್ಕೂಟ(ಐಎಸ್‌ಸ್‌ಎ)ದ  ಅಧ್ಯಕ್ಷ ಎರೊಲ್ ಸ್ಟೂವ್ ಮಾತನಾಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry