ಭಾನುವಾರ, 18–8–1968

7

ಭಾನುವಾರ, 18–8–1968

Published:
Updated:
Deccan Herald

ಮುರಾರಜಿಗೆ ಪಕ್ಷದ ಬೆಂಬಲದಲ್ಲಿ ಒಡಕು
ನವದೆಹಲಿ, ಆ. 17–
ಕಾಂತಿಲಾಲ್‌ ದೇಸಾಯಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಎಸ್‌.ಎಸ್‌.ಪಿ. ನಾಯಕ ಮಧು ಲಿಮಯೆ ಅವರು ಮಂಡಿಸಿರುವ ಆರೋಪಗಳ ಬಗ್ಗೆ ಉಪ ಪ್ರಧಾನಮಂತ್ರಿ ಮುರಾರಜಿ ದೇಸಾಯಿ ಅವರಿಗೆ ಕಾಂಗ್ರೆಸ್‌ ಪಕ್ಷದೊಳಗೇ ಬೆಂಬಲ ಕುಸಿಯುತ್ತಿದೆ.

ಲಿಮಯೆ ಆಪಾದನೆಗಳ ಬಗ್ಗೆ ಈ ವಾರದ ಆರಂಭದಲ್ಲಿ ಮುರಾರಜಿ ದೇಸಾಯಿ ಅವರಿಗೆ ಕಾಂಗ್ರೆಸ್‌ ಪಕ್ಷದ ಪೂರ್ಣ ಬೆಂಬಲ ಕಂಡುಬಂದಿತ್ತು. ಆದರೆ ಈಗ ಭಿನ್ನಾಭಿಪ್ರಾಯವುಂಟಾಗಿದ್ದು ಸಂಪೂರ್ಣ ಬೆಂಬಲದಲ್ಲಿ ಬಿರುಕುಗಳು ಗೋಚರಿಸಲಾರಂಭಿಸಿವೆ.

ಶ್ರೀಗಂಧಕ್ಕೆ ಗಂಡಾಂತರ
ಬೆಂಗಳೂರು, ಆ. 17–
ಪ್ರಪಂಚ ಹಾಗೂ ಪುರಾಣ ಪ್ರಸಿದ್ಧವಾದ ಮೈಸೂರಿನ ಶ್ರೀಗಂಧ ಸಿರಿಗೆ ಕುತ್ತು ಒದಗಿದೆ. ರಾಜ್ಯದ ಹತ್ತು ಸಹಸ್ರ ಚದರ ಮೈಲಿ ಪ್ರದೇಶದಲ್ಲಿ ಗಂಧದ ಮರಗಳು ಮದ್ದು ಅರಿಯದ ಮಾರಕ ವ್ಯಾಧಿಗೆ ತುತ್ತಾಗಿ ಬೆಳವಣಿಗೆ ನಿಂತು ಸಾಯತೊಡಗಿವೆ.

ಕಬ್ಬಿನ ಬೆಲೆ ಇಳಿಸುವ ಯತ್ನಕ್ಕೆ ಬೆಳೆಗಾರರ ಉಗ್ರ ಪ್ರತಿಭಟನೆ
ಬೆಂಗಳೂರು, ಆ. 17–
ಮೈಸೂರು ಕಬ್ಬು ಬೆಳೆಗಾರರ ಫೆಡರೇಶನ್‌ನ ಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಮತ್ತು ಆಹಾರ ಶಾಖೆ ಸ್ಟೇಟ್‌ ಸಚಿವರನ್ನು ಭೇಟಿಮಾಡಿ ಕಬ್ಬಿನ ಬೆಲೆ ಇಳಿಸುವ ಪ್ರಯತ್ನಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು.

ಪಾಕಿಸ್ತಾನ್‌ ದಾಳಿ ಸನ್ನಿಹಿತವೆಂದು ಮುಧೋಕ್‌ 
ಹೈದರಾಬಾದ್‌, ಆ. 17 –
ತರಾತುರಿಯಿಂದ ಸಮರ ಸಿದ್ಧತೆಯಲ್ಲಿ ತೊಡಗಿರುವ ಪಾಕಿಸ್ತಾನದಿಂದ ಭಾರತದ ಮೇಲೆ ದಾಳಿ ಸನ್ನಿಹಿತ ಎಂದು ಜನಸಂಘದ ನಾಯಕ ಬಲರಾಜ್‌ ಮುಧೋಕ್‌ ಅವರು ಇಲ್ಲಿ ಇಂದು ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !