ಧಾನ್ಯ ಹಂಚಿಕೆಗೆ ವ್ಯಾಪಕ ವ್ಯವಸ್ಥೆ ಇರಬೇಕೆಂದು ಒತ್ತಾಯ

7

ಧಾನ್ಯ ಹಂಚಿಕೆಗೆ ವ್ಯಾಪಕ ವ್ಯವಸ್ಥೆ ಇರಬೇಕೆಂದು ಒತ್ತಾಯ

Published:
Updated:

ಧಾನ್ಯ ಹಂಚಿಕೆಗೆ ವ್ಯಾಪಕ ವ್ಯವಸ್ಥೆ ಇರಬೇಕೆಂದು ಒತ್ತಾಯ

ತುಮಕೂರು, ಅ. 12– ಹೊಸ ಬೆಳೆಯ ಆಹಾರ ಧಾನ್ಯ ಮಾರುಕಟ್ಟೆಗೆ ಬರುವವರೆಗೆ ಸಾಕಷ್ಟು ಆಹಾರವನ್ನು ನ್ಯಾಯಬೆಲೆಯಲ್ಲಿ ನಿಯಮಿತ ಕಾಲದಲ್ಲಿ ಹಂಚುವ ವ್ಯಾಪಕ ವ್ಯವಸ್ಥೆ ಆರಂಭಿಸಬೇಕೆಂದು ಭಾರತೀಯ ಜನಸಂಘದ ಕರ್ನಾಟಕ ಪ್ರಾಂತೀಯ ಸಮ್ಮೇಳನವು ಸರ್ಕಾರವನ್ನು ಒತ್ತಾಯಪಡಿಸಿದೆ.

ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ ಅವರ ನಿಧನ

ಮಂಗಳೂರು, ಅ. 12– ಕೆಲವು ಕಾಲದಿಂದ ಅಸ್ವಸ್ಥರಾಗಿದ್ದ ಧರ್ಮಸ್ಥಳದ ಶ್ರೀ ರತ್ನವರ್ಮ ಹೆಗ್ಗಡೆಯವರು ಇಂದು ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು. ಇವರು ವಿಧಾನಸಭಾ ಸದಸ್ಯರಾಗಿದ್ದರು.

ಅವರ ಪಾರ್ಥಿವ ಶರೀರವನ್ನು ಅಲ್ಲಿಂದ ಧರ್ಮಸ್ಥಳಕ್ಕೆ ಒಯ್ದು ಅಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ನಾಲ್ಕನೇ ಯೋಜನೆಯಲ್ಲಿ ಶಿಕ್ಷಣಕ್ಕೆ 1300 ಕೋಟಿ ರೂ. ಒದಗಿಸಲು ಒತ್ತಾಯ

ನವದೆಹಲಿ, ಅ. 12– ನಾಲ್ಕನೇ ಯೋಜನೆಯಲ್ಲಿ ಶಿಕ್ಷಣಕ್ಕೆ 1300 ಕೋಟಿ ರೂಪಾಯಿ ಮಂಜೂರು ಮಾಡುವಂತೆ ಶಿಕ್ಷಣ ಕುರಿತ ಕೇಂದ್ರ ಸಲಹಾ ಮಂಡಳಿಯು ಯೋಜನಾ ಆಯೋಗಕ್ಕೆ ಇಂದು ಇಲ್ಲಿ ಸರ್ವಾನುಮತದಿಂದ ಶಿಫಾರಸು ಮಾಡಿತು.

ವಿಶ್ವವಿದ್ಯಾಲಯಗಳಲ್ಲಿ ಏಕರೂಪ ಶಿಕ್ಷಣ: ರಾಜ್ಯದ ಸಲಹೆ ಪರಿಶೀಲನೆ

ನವದೆಹಲಿ, ಅ.12– ಭಾರತದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಏಕರೂಪ ಶಿಕ್ಷಣ ಪದ್ಧತಿ ಇರಬೇಕೆಂದು ಪ್ರತಿಪಾದಿಸುವ ಮೈಸೂರು ಸರ್ಕಾರದ ಸಲಹೆಯನ್ನು ಕೇಂದ್ರ ಶಿಕ್ಷಣ ಸಲಹಾ ಮಂಡಳಿ ಸಭೆ ಪರಿಶೀಲಿಸಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !