ಕೂಡಲಸಂಗಮ ಅಭಿವೃದ್ಧಿ; ಇನ್ನೂ ಮರೀಚಿಕೆ

7
ನಾಲ್ಕು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು

ಕೂಡಲಸಂಗಮ ಅಭಿವೃದ್ಧಿ; ಇನ್ನೂ ಮರೀಚಿಕೆ

Published:
Updated:
Deccan Herald

ಕೂಡಲಸಂಗಮ : ಬಸವಣ್ಣನ ಐಕ್ಯ ಸ್ಥಳ ಕೂಡಲಸಂಗಮ, ಜನ್ಮಸ್ಥಳ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಮತ್ತು ಚಿಕ್ಕಸಂಗಮ ಕ್ಷೇತ್ರಗಳನ್ನು ಸಮಗ್ರ ಅಭಿವೃದ್ಧಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ನಾಲ್ಕು ತಿಂಗಳು ಕಳೆದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ.

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹369 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಅದರಲ್ಲಿ ಮೊದಲ ಹಂತದಲ್ಲಿ ₹139.61 ಕೋಟಿ ಮೊತ್ತದ ಕಾಮಗಾರಿಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 12 ರಂದು ಕೂಡಲಸಂಗಮದಲ್ಲಿ ನಾಡಿನ ಮಠಾಧೀಶರ ಸಮ್ಮುಖದಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಆದರೆ ಇಲ್ಲಿಯವರೆಗೆ ಕೆಲಸ ಆರಂಭವಾಗದಿರುವುದು ಬಸವ ಅನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕೂಡಲಸಂಗಮದಲ್ಲಿ ಬಸವ ಅಂತರಾಷ್ಟ್ರೀಯ ಮ್ಯೂಸಿಯಂ ನಿರ್ಮಾಣ, ಮೂಲ ಸೌಕರ್ಯಗಳ ಅಭಿವೃದ್ಧಿ, ಬಸವನ ಬಾಗೇವಾಡಿ, ಚಿಕ್ಕ ಸಂಗಮದಲ್ಲಿ ಅಭಿವೃದ್ಧಿ ಕಾಮಗಾರಿಯ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸರ್ಕಾರ ₹ 44.93 ಕೋಟಿ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ₹ 94.57 ಕೋಟಿ ಹಣ ಬಿಡುಗಡೆಗೊಳಿಸಿ, ಆಡಳಿತಾತ್ಮಕ ಅನುಮೋದನೆ ನೀಡಿದೆ. ಆದರೆ ಟೆಂಡರ್ ಪ್ರಕ್ರಿಯೆ ಮುಗಿದು ನಾಲ್ಕು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ.

ಮೊದಲ ಹಂತದಲ್ಲಿ ಬಸವ ಅಂತರಾಷ್ಡ್ರೀಯ ಕೇಂದ್ರದ ಕಟ್ಟಡ ಮಾರ್ಪಾಡು,ಹೆಚ್ಚುವರಿ ಕಟ್ಟಡ,ಛತ್ರ ನಿರ್ಮಾಣ, ಕಲ್ಯಾಣ ಮಂಟಪ,ಮಿನಿ ಥಿಯೇಟರ್, ಓರಿಯಂಟೇಶನ್ ಕೇಂದ್ರ, ಶರಣ ಗ್ರಾಮ, ವಾಣಿಜ್ಯ ಸಂಕೀರ್ಣ ಮೇಲ್ದರ್ಜೆಗೇರಿಸುವುದು, ಮೂಲ ಸೌಕರ್ಯಗಳ ಅಭಿವೃದ್ಧಿ, ಬಸವನ ಬಾಗೇವಾಡಿಯಲ್ಲಿ ಕಲ್ಯಾಣ ಮಂಟಪ, ಮಾಹಿತಿ ಕೇಂದ್ರ, ಚಿಕ್ಕ ಸಂಗಮದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್, ಮೂರು ಮುಖ್ಯ ದ್ವಾರಗಳು, ಛತ್ರ, ಅತಿಥಿ ಗೃಹ, ಸ್ನಾನ ಘಟ್ಟ ನಿರ್ಮಾಣ ಮಾಡಲಾಗುತ್ತಿದೆ.‌

ಕೂಡಲಸಂಗಮಕ್ಕೆ 1998ರಲ್ಲಿ  ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ₹36 ಕೋಟಿ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದರು. ನಂತರ ಯಾವ ಮುಖ್ಯಮಂತ್ರಿಗಳು ಹಣ ನೀಡಿರಲಿಲ್ಲ. ಸಿದ್ದರಾಮಯ್ಯ ₹139.61 ಕೋಟಿ ಅನುದಾನ ನೀಡಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !