ಲಂಚ: ಕಂಪ್ಯೂಟರ್‌ ಆಪರೇಟರ್‌ ಬಂಧನ

7

ಲಂಚ: ಕಂಪ್ಯೂಟರ್‌ ಆಪರೇಟರ್‌ ಬಂಧನ

Published:
Updated:
Deccan Herald

ಕೋಲಾರ: ಅಂಬೇಡ್ಕರ್ ಅಭಿವೃದ್ದಿ ನಿಗಮದ ಕಂಪ್ಯೂಟರ್ ಆಪರೇಟರ್‌ ಮಂಜುನಾಥ್ ಅವರು ಗಂಗಾ ಕಲ್ಯಾಣ ಯೋಜನೆ ಫಲಾನುಭವಿಯಿಂದ ಗುರುವಾರ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ವಲಗೇರನಹಳ್ಳಿ ಗ್ರಾಮದ ರೇಣುಕಾ ಎಂಬುವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಸಹಾಯಧನ ಮಂಜೂರು ಮಾಡಲು ಮಂಜುನಾಥ್ ₹ 6 ಸಾವಿರ ಲಂಚ ಕೇಳಿದ್ದರು. ಈ ಸಂಬಂಧ ರೇಣುಕಾ ಅವರು ಎಸಿಬಿಗೆ ದೂರು ಕೊಟ್ಟಿದ್ದರು.

ಈ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನಿಗಮದ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಮಂಜುನಾಥ್‌ರನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !