ಕರ್ತವ್ಯಕ್ಕೆ ಗೈರು: ಶಿಕ್ಷಕ ಅಮಾನತು

5

ಕರ್ತವ್ಯಕ್ಕೆ ಗೈರು: ಶಿಕ್ಷಕ ಅಮಾನತು

Published:
Updated:

ಕೋಲಾರ: ಕರ್ತವ್ಯಕ್ಕೆ ಗೈರಾಗಿ ಅಶಿಸ್ತು ತೋರಿದ ಕಾರಣಕ್ಕೆ ತಾಲ್ಲೂಕಿನ ಗುಡ್ಡಣ್ಣಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ರತ್ನಯ್ಯ ಆದೇಶ ಹೊರಡಿಸಿದ್ದಾರೆ.

ನಾರಾಯಣಸ್ವಾಮಿ ಅವರು ಹಲವು ತಿಂಗಳುಗಳಿಂದ ತಮ್ಮ ಬದಲು ಮಹಿಳೆಯೊಬ್ಬರನ್ನು ಶಾಲೆಗೆ ನಿಯೋಜಿಸಿ ಮಕ್ಕಳಿಗೆ ಪಠ್ಯ ಬೋಧನೆ ಮಾಡಿಸುತ್ತಿದ್ದರು. ಆ ಮಹಿಳೆಗೆ ತಿಂಗಳಿಗೆ ₹ 4 ಸಾವಿರ ಸಂಬಳ ಕೊಡುತ್ತಿದ್ದರು. 15 ದಿನಕ್ಕೊಮ್ಮೆ ಶಾಲೆಗೆ ಹೋಗುತ್ತಿದ್ದ ನಾರಾಯಣಸ್ವಾಮಿ ಹಾಜರಾತಿ ಪುಸ್ತಕದಲ್ಲಿ ಒಟ್ಟಿಗೆ 15 ದಿನಗಳ ಸಹಿ ಮಾಡುತ್ತಿದ್ದರು.

ನಾರಾಯಣಸ್ವಾಮಿ ಅವರು ಶಾಲೆಯ ಪ್ರತಿ ವಿದ್ಯಾರ್ಥಿ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ₹ 10 ಸಾವಿರ ಠೇವಣಿ ಇಟ್ಟಿದ್ದರು. ಜತೆಗೆ ಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ದೇವಸ್ಥಾನಗಳಿಗೆ ದೇಣಿಗೆ ಕೊಡುತ್ತಿದ್ದರು. ಹೀಗಾಗಿ ಗ್ರಾಮಸ್ಥರು ಅವರ ವಿರುದ್ಧ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟಿರಲಿಲ್ಲ ಎಂದು ಗೊತ್ತಾಗಿದೆ.

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಶುಕ್ರವಾರ (ಆ.10) ಮಧ್ಯಾಹ್ನ ಗುಡ್ಡಣ್ಣಪುರ ಶಾಲೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನಾರಾಯಣಸ್ವಾಮಿ ಕರ್ತವ್ಯಕ್ಕೆ ಗೈರಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಬಳಿಕ ಅಧಿಕಾರಿಗಳು ಡಿಡಿಪಿಐಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಡಿಡಿಪಿಐ, ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !