ಭಾಷೆಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

7
ಕನ್ನಡ ಸಂಸ್ಕೃತಿ ಸೇವಾ ಭಾರತಿ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ‘ಕನ್ನಡ ಪದ ಸಂಪದ’ ಕಾರ್ಯಕ್ರಮ

ಭಾಷೆಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಕನ್ನಡ ಸಾಹಿತ್ಯ 2500 ವರ್ಷಗಳ ಇತಿಹಾಸ ಹೊಂದಿದೆ. ಈ ಭಾಷೆಯದನ್ನು ಉಳಿಸುವ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಅಧ್ಯಕ್ಷ ಓಂಕಾರಪ್ರಿಯ ತಿಳಿಸಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಕನ್ನಡ ಸಂಸ್ಕೃತಿ ಸೇವಾ ಭಾರತಿ ವತಿಯಿಂದ ಆಯೋಜಿಸಿದ್ದ ‘ಕನ್ನಡ ಪದ ಸಂಪದ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಕ್ಷರಗಳ ಜೋಡಣೆಯಿಂದ ಪದಗಳಾಗುತ್ತವೆ. ಆದರೆ ಬರೆಯುವಾಗ ಅಕ್ಷರಗಳನ್ನು ತಪ್ಪಾಗಿ ಬರೆದರೆ ಪದದ ಅರ್ಥವೇ ಬೇರೆಯಾಗುತ್ತದೆ. ಅರ್ಥಕ್ಕೆ ತಕ್ಕಂತೆ ಅಕ್ಷರ ಬರೆಯಬೇಕು. ಹಿಂದೆ ಮಕ್ಕಳು ಚುಕ್ಕೆ ಆಟ ಆಡುತ್ತಿದ್ದರು. ಈಗ ಅದರ ಬದಲಾಗಿ ಅಕ್ಷರದ ಆಟ ಆಡಬೇಕಾಗಿದೆ’ ಎಂದು ಹೇಳಿದರು.

‘ಒಂದು ಅಕ್ಷರದ ಪಕ್ಕದಲ್ಲಿ ಬೇರೆ ಬೇರೆ ಅಕ್ಷರ ಬರೆಯುತ್ತಾ ಹೋದರೆ ಬಹಳಷ್ಟು ಪದಗಳು ಸೃಷ್ಟಿಯಾಗುತ್ತದೆ. ಜತೆಗೆ ಮಕ್ಕಳಲ್ಲಿ ಪದಗಳ ಸಂಪತ್ತಿನ ಜ್ಞಾನ ಹೆಚ್ಚುತ್ತದೆ. ವಿದ್ಯಾರ್ಥಿಗಳು ಉತ್ತರ ಬರೆಯುವಾಗ ಪರೀಕ್ಷೆಯಲ್ಲಿ ಅರ್ಥವಾಗುವಂತೆ ಬರೆಯಬೇಕು. ಆಗಲೇ ಹೆಚ್ಚು ಅಂಕ ಬರುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಕನ್ನಡ ಪರ ಸಂಸ್ಥೆಗಳು, ಶಿಕ್ಷಣ ಇಲಾಖೆ ಹೆಚ್ಚು ಒತ್ತು ನೀಡಬೇಕು’ ಎಂದರು.

ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಪ್ರಕಾಶ್ ಮಾತನಾಡಿ, ‘ನಮ್ಮ ನೆಲದ ಭಾಷೆಯಾದ ಕನ್ನಡವನ್ನು ಇಲ್ಲಿನ ಪ್ರತಿಯೊಬ್ಬರೂ ಪ್ರೀತಿಸಿ, ಗೌರವಿಸಬೇಕು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನಿರಂತರ ಓದುವುದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.

ಆಡಳಿತ ಮಂಡಳಿಯ ಸದಸ್ಯರಾದ ಕೆ.ನಾರಾಯಣಪ್ಪ ಮತನಾಡಿ, ‘ಇಂದಿನ ವಿದ್ಯಾರ್ಥಿಗಳೇ ಕನ್ನಡದ ಮುಂದಿನ ರಾಯಭಾರಿಗಳು. ಅವರು ಕನ್ನಡವನ್ನು ಪ್ರೀತಿಸಿ ಗೌರವಿಸಿ, ನಿತ್ಯ ವ್ಯವಹಾರದಲ್ಲಿ ಬಳಸಿದಷ್ಟು ಭಾಷೆ ಹೆಚ್ಚು ಗಟ್ಟಿಗೊಳ್ಳುತ್ತ ಹೋಗುತ್ತದೆ’ ಎಂದು ಹೇಳಿದರು. ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಶಿಕ್ಷಕರಾದ ಕೆ.ಟಿ.ತಿಮ್ಮರಾಜು, ನಾಗೇಶ್, ನಿವೃತ್ತ ಶಿಕ್ಷಕ ಶಿವರಾಂ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !