‘ಸಂವಿಧಾನ ಪ್ರತಿ ಸುಟ್ಟವರಿಗೆ ಗಲ್ಲುಶಿಕ್ಷೆ ಕೊಡಿ’

7
ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ಕರೆ ನೀಡಿದ್ದ ಕರೆಸುರಪುರ ಬಂದ್ ಭಾಗಶಃ ಯಶಸ್ವಿ

‘ಸಂವಿಧಾನ ಪ್ರತಿ ಸುಟ್ಟವರಿಗೆ ಗಲ್ಲುಶಿಕ್ಷೆ ಕೊಡಿ’

Published:
Updated:
Deccan Herald

ಸುರಪುರ: ದೆಹಲಿಯ ಜಂತರ್ ಮಂತರ್‍ನಲ್ಲಿ ಸಂವಿಧಾನದ ಪ್ರತಿಗಳನ್ನು ದಹನ ಮಾಡಿದ ಪ್ರಕರಣ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ಮಂಗಳವಾರ ಕರೆ ನೀಡಿದ್ದ ಕರೆಸುರಪುರ ಬಂದ್ ಭಾಗಶಃ ಯಶಸ್ವಿಯಾಯಿತು.

ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಬಸ್ ಸಂಚಾರ ಸುಗಮವಾಗಿತ್ತು. ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಪ್ರತಿಭಟನಾಕಾರರು ಗೌತಮ ಬುದ್ಧ ವೃತ್ತದಿಂದ ಗಾಂಧಿ ವೃತದವರೆಗೆ ಮೆರವಣಿಗೆ ನಡೆಸಿದರು. ಗಾಂಧಿವೃತ್ತದಲ್ಲಿ ಸಮಾವೇಶಗೊಂಡ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಮಿತಿ ಜಿಲ್ಲಾ ಘಟಕದ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಮನುವಾದಿಗಳು ಕಾನೂನಿಗೆ ಹೆದರದೆ ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ದೇಶಕ್ಕೆ ಅಗೌರವ ತೋರಿದ್ದಾರೆ. ಅಂಬೇಡ್ಕರ್ ವಿರುದ್ಧ ಧಿಕ್ಕಾರ ಕೂಗಿ ಅವಮಾನ ಮಾಡಿದ್ದಾರೆ’ ಎಂದರು.

‘ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ಮಾಡುವ ಹಕ್ಕು ಸಂವಿಧಾನದತ್ತವಾಗಿ ಬಂದಿದೆ. ಹಕ್ಕನ್ನು ಕಲ್ಪಸಿರುವ ಸಂವಿಧಾನವನ್ನು ಸುಟ್ಟು ಹಾಕುವ ಮೂಲಕ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಇಂಥಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಕೇಂದ್ರ ಸರ್ಕಾರ ಮೃದುಧೋರಣೆ ತಾಳುತ್ತಿದೆ’ ಎಂದು ದೂರಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಖಾರಕ್ಕೆ ಬಂದ ನಂತರ ವಿಕೃತ ಮನಸ್ಸುಗಳು ಮೀಸಲಾತಿ ವಿರೋಧಿಸುತ್ತಿವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೂ ಅವಮಾನ ಮಾಡುತ್ತಿದ್ದಾರೆ. ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ದೇಶದ್ರೋಹ ಆರೋಪದಡಿ ಗಲ್ಲುಶಿಕ್ಷಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.

ಗ್ರೇಡ್–2 ತಹಶೀಲ್ದಾರ ಸೋಫಿಯಾ ಸುಲ್ತಾನ ಅವರಿಗೆ ಮನವಿ ಸಲ್ಲಿಸಲಾಯಿತು. ಮಲ್ಲಯ್ಯ ಕಮತಗಿ, ಅಹ್ಮದ್ ಪಠಾಣ, ದೇವಿಂದ್ರಪ್ಪ ಪತ್ತಾರ, ಮೂರ್ತಿ ಬೊಮ್ಮನಳ್ಳಿ, ಹಣಮಂತ ಕುಂಬಾರಪೇಟ ಮಾತನಾಡಿದರು.

ಜಿಲ್ಲಾ ಸಂಘಟನಾ ಸಂಚಾಲಕ ರಾಮಣ್ಣ ಶೆಳ್ಳಗಿ, ತಾಲ್ಲೂಕು ಘಟಕದ ಸಂಚಾಲಕ ಮರೆಪ್ಪ ಹಾಲಗೇರಾ, ಮಾನಪ್ಪ ಬಿಜಾಸ್ಪೂರ, ಅಜೀಜ್‍ಸಾಬ್, ತಿಪ್ಪಣ್ಣ ಶೆಳ್ಳಗಿ, ಬುದ್ದಿವಂತ, ಮಾನಪ್ಪ, ಜೆಟ್ಟೆಪ್ಪ ನಾಗರಾಳ, ಮಹೇಶ ಯಾದಗಿರಿ, ಮರಿಲಿಂಗಪ್ಪ ಹುಣಸಿಹೊಳೆ, ಭೀಮಣ್ಣ ಕೊಂಗಂಡಿ, ಮಲ್ಲಿಕಾರ್ಜುನ ದೋರನಳ್ಳಿ, ರಮೇಶ ಹುಂಡೇಕಲ್, ಶೇಖಪ್ಪ ಬಂಡಾರೆ, ಬಸಲಿಂಗಪ್ಪ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !