ಬೂತ್‍ ಮಟ್ಟದಲ್ಲಿ ಕಾಂಗ್ರೆಸ್‌ ಬಲವರ್ಧನೆಗೆ ಶಕ್ತಿ ಪ್ರಾಜೆಕ್ಟ್: ಸೂರಜ್ ಹೆಗಡೆ

7

ಬೂತ್‍ ಮಟ್ಟದಲ್ಲಿ ಕಾಂಗ್ರೆಸ್‌ ಬಲವರ್ಧನೆಗೆ ಶಕ್ತಿ ಪ್ರಾಜೆಕ್ಟ್: ಸೂರಜ್ ಹೆಗಡೆ

Published:
Updated:
Deccan Herald

ಹರಿಹರ: ಬೂತ್‍ ಮಟ್ಟದ ಕಾರ್ಯಕರ್ತರ ಸಮಸ್ಯೆಗಳನ್ನು ಎಐಸಿಸಿಗೆ ತಲುಪಿಸುವ ಪರಿಕಲ್ಪನೆಯಲ್ಲಿ ಈ ಅಭಿಯಾನ ಆರಂಭಿಸಲಾಗಿದೆ ಎಂದು ಶಕ್ತಿ ಪ್ರಾಜೆಕ್ಟ್ ನಿರ್ವಾಹಕ ಅಧ್ಯಕ್ಷ ಸೂರಜ್ ಹೆಗಡೆ ತಿಳಿಸಿದರು.

ನಗರದ ಕಾಟ್ವೆ ಭವನದಲ್ಲಿ ಶಾಸಕ ಎಸ್. ರಾಮಪ್ಪ ಅಧ್ಯಕ್ಷತೆಯಲ್ಲಿ ಭಾನುವಾರ ಸಂಜೆ ನಡೆದ ಲೋಕ ಸಂಪರ್ಕ ಅಭಿಯಾನ ಶಕ್ತಿ ಪ್ರಾಜೆಕ್ಟ್ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ ಪ್ರತಿ ಬೂತ್‍ನ ಕಾರ್ಯಕರ್ತನ ಅನಿಸಿಕೆ ಹಾಗೂ ಸಲಹೆಗಳನ್ನು ಪಡೆಯುವ ಜತೆಗೆ ಅವರಿಗೆ ಎಐಸಿಸಿಯ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ತಿಳಿಸುವುದು ಈ ಅಭಿಯಾನದ ಉದ್ದೇಶ. ಕಾರ್ಯಕರ್ತರು ತಮ್ಮ ಮತದಾರ ಚೀಟಿಯ ಸಂಖ್ಯೆಯನ್ನು 7045006100ಕ್ಕೆ ಎಸ್‌ಎಂಎಸ್‌ ಮಾಡುವ ಮೂಲಕ ಎಐಸಿಸಿಯ ಕಾರ್ಯಕ್ರಮ ಪಟ್ಟಿಯನ್ನು ಸ್ಥಳದಲ್ಲಿಯೇ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‍ ಸರ್ಕಾರ ಭ್ರಷ್ಟಚಾರ ರಹಿತ ಆಡಳಿತ ನೀಡುವ ಜತೆಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿತ್ತು. ಆದರೆ, ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮುಟ್ಟಿಸುವಲ್ಲಿ ಕಾರ್ಯಕರ್ತರು ವಿಫಲರಾದ ಹಿನ್ನೆಲೆಯಲ್ಲಿ ಎಐಸಿಸಿ ಈ ಯೋಜನೆ ರೂಪಿಸಿದೆ. ಪ್ರತಿ ಕಾರ್ಯಕರ್ತರು ಬೂತ್‍ಮಟ್ಟದಲ್ಲಿ ತಲಾ 15 ಸದಸ್ಯರನ್ನು ನೋಂದಣಿ ಮಾಡಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ ಬಲವರ್ಧನೆಗೆ ಶ್ರಮಿಸಬೇಕು ಎಂದು ಕರೆನೀಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ನೀಡುವ ಜತೆಗೆ ಅನೇಕ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಅಧಿಕಾರದ ಗದ್ದುಗೆಗೇರಿದರು. ಆದರೆ, ರಫೇಲ್‍ ಖರೀದಿಯಲ್ಲಿ ಎಚ್‍ಎಎಲ್‍ ಕಂಪನಿ ಬದಲು ಅಂಬಾನಿ ಸಮೂಹಕ್ಕೆ ನೀಡುವ ಮೂಲಕ ಬಹುರಾಷ್ಟ್ರೀಯ ಕಂಪನಿಯ ಏಜೆಂಟ್‍ನಂತೆ ವರ್ತಿಸುತ್ತಿದ್ದಾರೆ. ಉದ್ಯಮಿಗಳಿಗೆ ಬಡವರ ಉಳಿತಾಯದ ಹಣವನ್ನು ಲೂಟಿ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಜನರ ಭರವಸೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಮಾತನಾಡಿ, ಯುಪಿಎ ಅವಧಿಯ ಯೋಜನೆಗಳನ್ನು ತಮ್ಮ ಯೋಜನೆಗಳು ಎಂದು ಪ್ರಚಾರ ಪಡೆಯುವ ಮೂಲಕ ಬಿಜೆಪಿ ಸರ್ಕಾರ ಕಾಲಹರಣ ಮಾಡಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ಕೋಮುಸೌಹರ್ದವನ್ನು ಕದಡಲು ಗಣೇಶತ್ಸೋವವನ್ನು ಬಳಸಿಕೊಳ್ಳಲಾಗುತ್ತಿದೆ. ಹಬ್ಬಗಳ ಮೂಲಕ ಯುವಕರನ್ನು ಪ್ರಚೋದಿಸಿ, ಕೋಮು ಗಲಭೆಗಳನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದು ಆಪಾದಿಸಿದರು.

ಶಾಸಕ ಎಸ್. ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸುಜಾತಾ, ನಗರಸಭೆ ಸದಸ್ಯರಾದ ಬಿ. ರೇವಣಸಿದ್ದಪ್ಪ, ಶಂಕರ್ ಖಟಾವಕರ್, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ಬಲ್ಕಿಷ್‍ಬಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಎಂ.ಬಿ. ಅಬೀದ್‍ ಅಲಿ ಅವರೂ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !