ಬುಧವಾರ, ಜೂನ್ 23, 2021
22 °C
ಬೆಂಗಳೂರಿನ ಸ್ಪರ್ಧಿಗಳ ಪ್ರಾಬಲ್ಯ

ದಸರಾ ಕ್ರೀಡಾಕೂಟದ ಈಜು: ಖುಷಿ, ಮೋಹಿತ್‌ ಮಿಂಚು

ಮಹಮ್ಮದ್‌ ನೂಮಾನ್ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದ (ಬಿಎಸಿ) ವಿ.ಮೋಹಿತ್ ಮತ್ತು ಖುಷಿ ದಿನೇಶ್ ಅವರು ದಸರಾ ಕ್ರೀಡಾಕೂಟದ ಈಜು ಸ್ಪರ್ಧೆಯ ಮೊದಲ ದಿನ ಮಿಂಚಿದರು.

ಚಾಮುಂಡಿವಿಹಾರ ಈಜುಕೊಳದಲ್ಲಿ ಶನಿವಾರ ನಡೆದ ಪುರುಷರ 800 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಮೋಹಿತ್ 9 ನಿಮಿಷ 01.9 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇದೇ ತಂಡದ ಯತೀಶ್‌ ಎಸ್‌ ಗೌಡ ಎರಡನೇ ಸ್ಥಾನ ಪಡೆದರೆ, ಬೆಂಗಳೂರು ಈಜು ಸಂಶೋಧನಾ ಕೇಂದ್ರದ (ಬಿಎಸ್‌ಆರ್‌ಸಿ) ಸೈಫ್‌ ಚಂದನ್‌ ಅಲಿ ಕಂಚು ಗೆದ್ದರು.

ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಖುಷಿ ಭಾರಿ ಮುನ್ನಡೆಯೊಂದಿಗೆ ಚಿನ್ನ ಗೆದ್ದರು. ಅವರು 9 ನಿ. 40.07 ಸೆಕೆಂಡುಗಳೊಂದಿಗೆ ಗುರಿ ತಲುಪಿದರು.

ಇಬ್ಬರಿಗೆ ಅಗ್ರಸ್ಥಾನ: ಪುರುಷರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ತುರುಸಿನ ಪೈಪೋಟಿ ನಡೆಯಿತು. 1 ನಿಮಿಷ 11.40 ಸೆಕೆಂಡುಗಳಲ್ಲಿ ಗುರಿ ತಲುಪಿದ ಬಿಎಸಿಯ ಲಿತೀಶ್ ಜಿ ಗೌಡ ಮತ್ತು ಎಸ್‌.ಹಿತೇನ್‌ ಮಿತ್ತಲ್ ಅಗ್ರಸ್ಥಾನ ಹಂಚಿಕೊಂಡರು. ಮಹಿಳೆಯರ ವಿಭಾಗದಲ್ಲಿ ಬಿಎಸ್‌ಆರ್‌ಸಿಯ ರಚನಾ ರಾವ್ ಮೊದಲ ಸ್ಥಾನ ಪಡೆದರು.

ಪುರುಷರ 200 ಮೀ. ಬ್ಯಾಕ್‌ ಸ್ಟ್ರೋಕ್‌ ಸ್ಪರ್ಧೆಯಲ್ಲಿ ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರದ ಆದಿತ್ಯ ಬೋಪಣ್ಣ 2 ನಿ. 19.74 ಸೆಕೆಂಡು ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರೆ, ಮಹಿಳೆಯರ ವಿಭಾಗದಲ್ಲಿ ಲತೀಶಾ ಮಂದಣ್ಣ ಜಯ ಸಾಧಿಸಿದರು.

ಮೊದಲ ದಿನದ ಫಲಿತಾಂಶ ಹೀಗಿದೆ:

ಪುರುಷರ ವಿಭಾಗ:

50 ಮೀ. ಬಟರ್‌ಫ್ಲೈ: ಅಚ್ಯುತ್‌ ವಿ.ಆರ್ (ನೆಟ್ಟಕಲ್ಲಪ್ಪ ಈಜು ಕೇಂದ್ರ)–1, ಅನಿರುದ್ಧ್ ಹರಿದಾಸ್‌ ಮುರಳಿ–2, ವೈಭವ್‌ ಆರ್‌ ಶೇಟ್ (ಬಿಎಸ್‌ಆರ್‌ಸಿ)–3. ಕಾಲ: 27.18 ಸೆ.

100 ಮೀ. ಬ್ರೆಸ್ಟ್‌ಸ್ಟ್ರೋಕ್: ಲಿತೀಶ್‌ ಜಿ ಗೌಡ (ಬಿಎಸಿ)–1, ಎಸ್‌.ಹಿತೇನ್‌ ಮಿತ್ತಲ್ (ಬಿಎಸಿ)–2, ನೀಲ್‌ ಮಸ್ಕರೇನಸ್ (ಬಿಎಸ್‌ಆರ್‌ಸಿ)–3. ಕಾಲ: 1 ನಿ. 11.40 ಸೆ.

200 ಮೀ. ಬ್ಯಾಕ್‌ಸ್ಟ್ರೋಕ್: ಆದಿತ್ಯ ಬೋಪಣ್ಣ (ನೆಟ್ಟಕಲ್ಲಪ್ಪ ಈಜು ಕೇಂದ್ರ)– 1, ಧ್ಯಾನ್‌ ಬಾಲಕೃಷ್ಣ (ಬಿಎಸಿ)–2, ಬಿ.ಜತಿನ್ (ಬಿಎಸ್‌ಆರ್‌ಸಿ)–3. ಕಾಲ: 2 ನಿ.19.74 ಸೆ.

200 ಮೀ. ಫ್ರೀಸ್ಟೈಲ್: ಅವಿನಾಶ್‌ ಎಂ–1, ರಯಾನ್‌ ಮೊಹಮ್ಮದ್‌–2, ವಿಕ್ರಮ್‌ ಗೌಡ–3 (ಎಲ್ಲರೂ ಬಿಎಸಿ) ಕಾಲ: 2 ನಿ.06.91 ಸೆ.

400 ಮೀ. ಮೆಡ್ಲೆ: ವಲ್ಲಭ ಕೃಷ್ಣ (ಪೂಜಾ ಈಜು ಕೇಂದ್ರ)–1, ಕಲ್ಪ್‌ ಎಸ್‌.ಬೊಹ್ರಾ (ಪೂಜಾ ಈಜು ಕೇಂದ್ರ)–2, ಬಿ.ಜತಿನ್ (ಬಿಎಸ್‌ಆರ್‌ಸಿ)–3. ಕಾಲ: 4 ನಿ.56.57 ಸೆ.

800 ಮೀ. ಫ್ರೀಸ್ಟೈಲ್: ವಿ.ಮೋಹಿತ್ (ಬಿಎಸಿ)–1, ಯತೀಶ್‌ ಎಸ್‌.ಗೌಡ (ಬಿಎಸಿ)–2, ಸೈಫ್‌ ಚಂದನ್‌ ಅಲಿ (ಬಿಎಸ್‌ಆರ್‌ಸಿ)–3. ಕಾಲ: 9 ನಿ. 01.19 ಸೆ.

ಮಹಿಳೆಯರ ವಿಭಾಗ: 50 ಮೀ. ಬಟರ್‌ಫ್ಲೈ: ಕುಷ್‌ನಾಜ್‌ ಸೋನಿ (ಬಿಎಸ್ಆರ್‌ಸಿ)–1, ಸಾನಿಯಾ ಜೆಸ್ಲಿನ್‌ ಡಿಸೋಜಾ (ಜೈಹಿಂದ್ ಈಜು ಕ್ಲಬ್‌, ಮಂಗಳೂರು)–2, ಭಾವನಾ ಐತಾಳ್ (ಬಿಎಸಿ)–3. ಕಾಲ: 31.35 ಸೆ.

100 ಮೀ. ಬ್ರೆಸ್ಟ್‌ಸ್ಟ್ರೋಕ್: ರಚನಾ ಎಸ್.ಆರ್‌.ರಾವ್ (ಬಿಎಸ್‌ಆರ್‌ಸಿ)–1, ವಿ.ಹಿತೈಷಿ (ವಿಜಯನಗರ ಈಜು ಕೇಂದ್ರ)–2, ಇಂಚರ ಎಸ್‌.ನಾರಾಯಣ (ಪೂಜಾ ಈಜು ಕೇಂದ್ರ)–3 ಕಾಲ: 1 ನಿ. 20.47 ಸೆ.

200 ಮೀ. ಬ್ಯಾಕ್‌ಸ್ಟ್ರೋಕ್: ಲತೀಶಾ ಮಂದಣ್ಣ (ಯಂಗ್‌ ಚಾಲೆಂಜರ್ಸ್‌ ಈಜು ಕ್ಲಬ್)–1, ಭೂಮಿಕಾ ಆರ್‌.ಕೆ (ಬಿಎಸ್‌ಆರ್‌ಸಿ)–2, ಶ್ರಿಯಾ ಆರ್ ಭಟ್ (ಬಿಎಸಿ)–3. ಕಾಲ: 2 ನಿ. 36.17 ಸೆ.

400 ಮೀ. ಮೆಡ್ಲೆ: ಜಿ.ಸಾಚಿ (ಬಿಎಸಿ)–1, ವಿಭಾ ಅಪರ್ಣಾ (ಪೂಜಾ ಈಜು ಕೇಂದ್ರ)–2, ಎಸ್‌.ನಿಧಿ (ಬಿಎಸ್‌ಆರ್‌ಸಿ)–3. ಕಾಲ: 5 ನಿ. 41.55 ಸೆ.

800 ಮೀ. ಫ್ರೀಸ್ಟೈಲ್: ಖುಷಿ ದಿನೇಶ್–1, ಎಸ್‌.ಎಸ್‌.ನಂದಿನಿ–2, ಅಂಕಿತಾ ಕೆ.ಗೌಡ–3 (ಎಲ್ಲರೂ ಬಿಎಸಿ) ಕಾಲ: 9 ನಿ.40.07 ಸೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು