ಕಬಡ್ಡಿ: ಪಟ್ನಾಗೆ ರೋಚಕ ಜಯ

7

ಕಬಡ್ಡಿ: ಪಟ್ನಾಗೆ ರೋಚಕ ಜಯ

Published:
Updated:
Deccan Herald

ಪಟ್ನಾ: ಇಲ್ಲಿನ ಪಾಟಲೀಪುತ್ರ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಕಬಡ್ಡಿ ಪಂದ್ಯದ ರಸ ರೋಮಾಂಚನ ಅನುಭವಿಸಿದರು. ಪ್ರೊ ಕಬಡ್ಡಿ ಲೀಗ್‌ನ ತವರಿನ ಲೆಗ್‌ನ ಕೊನೆಯ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡ ಬೆಂಗಾಲ್‌ ವಾರಿಯರ್ಸ್ ವಿರುದ್ಧ 29–27ರಿಂದ  ಜಯ ಸಾಧಿಸಿತು.

ಪಟ್ನಾದ ತವರಿನ ಕೊನೆಯ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಪ್ರೇಕ್ಷಕರು ಕ್ರೀಡಾಂಗಣಕ್ಕೆ ಲಗ್ಗೆ ಇರಿಸಿದ್ದರು. ಅವರ ಬೆಂಬಲದೊಂದಿಗೆ ಆತಿಥೇಯರು ಉತ್ತಮ ಆರಂಭ ಕಂಡರು. ಆದರೆ ಬೆಂಗಾಲ್‌ ಕೂಡ ತಿರುಗೇಟು ನೀಡಿದ್ದರಿಂದ ಪಂದ್ಯ ರೋಚಕವಾಯಿತು.

ರಣ್ ಸಿಂಗ್‌, ಮಹೇಶ್ ಗೌಡ್‌ ಮತ್ತು ಜಾಂಗ್ ಕುನ್‌ಲೀ ಅವರ ಅಮೋಘ ರೈಡಿಂಗ್ ಮೂಲಕ ಪ್ರಥಮಾರ್ಧದ ಮುಕ್ತಾಯದ ವೇಳೆ ಬೆಂಗಾಲ್‌ 15–12ರಿಂದ ಮುನ್ನಡೆಯಿತು. ದ್ವಿತೀಯಾರ್ಧದಲ್ಲೂ ಜಿದ್ದಾಜಿದ್ದಿಯ ಪೈಪೋಟಿ ಕಂಡು ಬಂತು. ಆದರೆ ಕೊನೆಗೆ ಜಯ ಪಟ್ನಾ ಪಾಲಾಯಿತು. ದೀಪಕ್ ನರ್ವಾಲ್‌, ಜೈದೀಪ್‌ ಮತ್ತು ವಿಜಯ್‌ ಕ್ರಮವಾಗಿ ಏಳು, ಐದು, ನಾಲ್ಕು ಪಾಯಿಂಟ್ ಗಳಿಸಿದರು.

ಬೆಂಗಾಲ್‌ ಪರ ರಣ್ ಸಿಂಗ್ ಏಳು, ಮಹೇಶ್‌ ಗೌಡ್‌ ಆರು ಮತ್ತು ಜಾಂಗ್ ಕುನ್‌ ಲೀ ಐದು ಪಾಯಿಂಟ್ ಗಳಿಸಿದರು.

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !