ಆವಲರೆಡ್ಡಿ ಅಧ್ಯಕ್ಷ, ಈರಚಿನ್ನಪ್ಪ ಉಪಾಧ್ಯಕ್ಷ

7
ಟಿಎಪಿಸಿಎಂಎಸ್‌: ಸಂಖ್ಯಾಬಲವಿಲ್ಲದೆ ನಾಮಪತ್ರ ಹಿಂತೆಗೆದ ಜೆಡಿಎಸ್ ಅಭ್ಯರ್ಥಿಗಳು, ಕಾಂಗ್ರೆಸ್ ಬೆಂಬಲಿತ ಉಮೇದುವಾರರ ಅವಿರೋಧ ಆಯ್ಕೆ

ಆವಲರೆಡ್ಡಿ ಅಧ್ಯಕ್ಷ, ಈರಚಿನ್ನಪ್ಪ ಉಪಾಧ್ಯಕ್ಷ

Published:
Updated:
Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್‌) ನೂತನ ಅಧ್ಯಕ್ಷರಾಗಿ ಆವಲರೆಡ್ಡಿ, ಉಪಾಧ್ಯಕ್ಷರಾಗಿ ಈರಚಿನ್ನಪ್ಪ ಅವರು ವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಆವಲರೆಡ್ಡಿ, ಈರಚಿನ್ನಪ್ಪ ಮತ್ತು ಜೆಡಿಎಸ್ ಬೆಂಬಲಿತರಾಗಿ ಮುನೇಗೌಡ ಮತ್ತು ಆವುಲಕೊಂಡರಾಯಪ್ಪ ಅವರು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಜೆಡಿಎಸ್ ಬೆಂಬಲಿತರು ತಮ್ಮ ಉಮೇದುವಾರಿಕೆ ಹಿಂಪಡೆದ ಕಾರಣ ಟಿಎಪಿಸಿಎಂಎಸ್‌ ನೂತನ ಸಾರಥಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.

ಈ ಮೂಲಕ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಿಎಲ್‌ಡಿ ಬ್ಯಾಂಕ್, ಎಪಿಎಂಸಿ, ನಗರಸಭೆ ಸೇರಿದಂತೆ ಬಹುಪಾಲು ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ ಶುಕ್ರವಾರ ಅಧಿಕೃತವಾಗಿ ಟಿಎಪಿಸಿಎಂಎಸ್‌ ಅನ್ನು ತನ್ನ ‘ಕೈ’ಗೆ ತೆಗೆದುಕೊಂಡಿತು.

ಸ್ಥಳೀಯ ಸಂಸ್ಥೆಗಳಲ್ಲಿ ಬಹುತೇಕ ತನ್ನ ಹಿಡಿತ ಕಳೆದುಕೊಂಡಿರುವ ಜೆಡಿಎಸ್‌ಗೆ ಕಳೆದ ಒಂದು ದಶಕದಿಂದ ಟಿಎಪಿಸಿಎಂಎಸ್‌ನಲ್ಲಿ ಉಳಿಸಿಕೊಂಡು ಬಂದಿದ್ದ ತನ್ನ ಹಿಡಿತವನ್ನು ಈ ಬಾರಿಯ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಟಿಎಪಿಸಿಎಂಎಸ್‌ ಆಡಳಿತ ಮಂಡಳಿಯ 14 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ‘ಎ’ ವರ್ಗದ 5 ಸ್ಥಾನಗಳ ಜತೆಗೆ ‘ಬಿ’ ವರ್ಗದಲ್ಲಿ 4 ಸ್ಥಾನಗಳನ್ನು ಗೆದ್ದುಕೊಂಡಿತ್ತು. ನಾಮ ನಿರ್ದೇಶನದ ಒಂದು ಸ್ಥಾನಕ್ಕೆ ಅಕ್ಟೋಬರ್ 31ರಂದು ರಾಜ್ಯ ಸರ್ಕಾರ ಕಾಂಗ್ರೆಸ್ ಬೆಂಬಲಿತ ಕಣಿತಹಳ್ಳಿ ನಾರಾಯಣಪ್ಪ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಒಟ್ಟು 15 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು.

ಶುಕ್ರವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದ ಶಾಸಕ ಡಾ.ಕೆ.ಸುಧಾಕರ್, ‘ಇದೊಂದು ಐತಿಹಾಸಿಕ ಜಯ. ಟಿಎಪಿಸಿಎಂಎಸ್‌ ಸಹ ಇವತ್ತು ಕೈವಶವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಪತ್ಯ ಪ್ರಬಲವಾಗುತ್ತಿದೆ. ಮುಂದಿನ ನಗರಸಭೆ ಚುನಾವಣೆಯ ಯಶಸ್ಸಿಗೆ ಇದು ಮುನ್ನುಡಿಯಾಗಲಿದೆ’ ಎಂಬ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಯಲುವಹಳ್ಳಿ ರಮೇಶ್, ಮರಳುಕುಂಟೆ ಕೃಷ್ಣಮೂರ್ತಿ, ಮೋಹನ್, ವೆಂಕಟನಾರಾಯಣಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !