ಆಗೇರ ಸಮಾಜದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ

7

ಆಗೇರ ಸಮಾಜದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ

Published:
Updated:
Prajavani

ಅಂಕೋಲಾ: ‘ಕ್ರೀಡೆ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಸದೃಢಗೊಳಿಸುತ್ತದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯ ಕಾಯ್ದುಕೊಳ್ಳಿ’ ಎಂದು ಪಿ.ಎಸ್‌ಐ ಶ್ರೀಧರ ಹೇಳಿದರು.

ನೀಲಂದೇವಿ ಕಬಡ್ಡಿ ತಂಡ ಹಾಗೂ ಊರನಾಗರಿಕರ ಆಶ್ರಯದಲ್ಲಿ ಅಜ್ಜಿಕಟ್ಟಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡ ಜಿಲ್ಲಾ ಮಟ್ಟದ ಆಗೇರ ಸಮಾಜದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಸಂಸ್ಕೃತಿಯ ಸೊಗಡನ್ನು ಹೊಂದಿರುವ ಆಗೇರ ಸಮಾಜ ಇತ್ತಿತ್ತಲಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂದೆ ಬರುತ್ತಿದೆ. ದೇಶಿಯ ಕ್ರೀಡೆ ಕಬಡ್ಡಿಗೆ ಆದ್ಯತೆ ನೀಡಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳನ್ನುಪ್ರೋತ್ಸಾಹಿಸಬೇಕು’ ಎಂದರು.

ತಾಲ್ಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಸುಭಾಸ ಕಾರೇಬೈಲ್ ಮಾತನಾಡಿ, ದುಶ್ಚಟಗಳಿಂದ ದೂರವಿದ್ದು, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಯುವಕರಿಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗಣು ಆಗೇರ ಮಾತನಾಡಿ, ‘ಅಜ್ಜಿಕಟ್ಟಾ ಗ್ರಾಮಕ್ಕೂ ಮತ್ತು ಕಬಡ್ಡಿ ಪಂದ್ಯಾವಳಿಗೂ ನಿಕಟವಾದ ಸಂಬಂಧವಿದೆ. ಈ ಗ್ರಾಮದಲ್ಲಿರುವ ಜನತೆ ಸಂಸ್ಕೃತಿಯನ್ನು ಅರಿತವರಾಗಿದ್ದಾರೆ. ಕ್ರೀಡೆಯ ಜೊತೆಯಲ್ಲಿ ಇನ್ನುಳಿದ ಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವುದರ ಮುಖೇನ ನಮ್ಮ ಸಮಾಜ ಜಾಗೃತವಾಗಬೇಕಿದೆ’ ಎಂದರು.

ಪ್ರೊಬೇಷನರಿ ಪಿ.ಎಸ್‌ಐಗಳಾದ ಸಿದ್ಧಪ್ಪ, ಅನಿಲ, ಮಾತನಾಡಿದರು. ಜಯಶೀಲ ಆಗೇರ ಸ್ವಾಗತಿಸಿದರು. ಭಾಸ್ಕರ ಆಗೇರ ನಿರ್ವಹಿಸಿದರು. ರಾಜೇಂದ್ರ ಆಗೇರ ವಂದಿಸಿದರು. ಪ್ರಮುಖರಾದ ರಮೇಶ, ಗಣಪತಿ, ಕುಮಾರ, ಗಜಾನನ, ರಘುವೀರ, ಸಂದೇಶ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !