ಬಂದ್‌ಗೆ ಬಾಗಲಕೋಟೆ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ

7
ರಸ್ತೆಗೆ ಇಳಿಯದ ಬಸ್‌ಗಳು, ಶಾಲಾ–ಕಾಲೇಜಿಗೆ ರಜೆ ಘೋಷಣೆ

ಬಂದ್‌ಗೆ ಬಾಗಲಕೋಟೆ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ

Published:
Updated:
Prajavani

ಬಾಗಲಕೋಟೆ: ಕೇಂದ್ರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್‌ಗೆ ಮೊದಲ ದಿನವಾದ ಬುಧವಾರ ಜಿಲ್ಲೆಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಸ್ಥಗಿತ, ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ ಹೊರತಾಗಿ ಉಳಿದಂತೆ ಜನಜೀವನ ಎಂದಿನಂತೆಯೇ ಇತ್ತು. ಖಾಸಗಿ ವಾಹನಗಳು, ಲಾರಿಗಳು, ಟಂಟಂಗಳ ಓಡಾಟದ ಕಾರಣ ನಗರದೊಳಗೆ ಸಂಚಾರಕ್ಕೆ ಅಷ್ಟಾಗಿ ತೊಂದರೆಯಾಗಲಿಲ್ಲ. ಆದರೆ ಬಸ್‌ಗಳು ಇಲ್ಲದೇ ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾದರು. ಮುಷ್ಕರಕ್ಕೆ ನೌಕರರ ಬೆಂಬಲದ ಹೊರತಾಗಿಯೂ ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದವು. ಆದರೆ ಗ್ರಾಹಕರು ಇರಲಿಲ್ಲ. ಸರ್ಕಾರಿ ನೌಕರರು ಕಚೇರಿಗಳಿಗೆ ಹಾಜರಾದರೂ ಸಾರ್ವಜನಿಕರ ಭೇಟಿ ಮಾತ್ರ ಕಡಿಮೆ ಇತ್ತು.

ಜಿಲ್ಲಾಡಳಿತದಿಂದ ರಜೆ ಘೋಷಣೆಯ ಹೊರತಾಗಿಯೂ ಕೆಲವು ಖಾಸಗಿ ಶಾಲೆಗಳು ಕಾರ್ಯನಿರ್ವಹಿಸಿದವು. ಮಾರುಕಟ್ಟೆಯಲ್ಲಿ ಅಂಗಡಿ–ಮುಂಗಟ್ಟು, ಹೋಟೆಲ್‌–ಉಪಾಹಾರ ಗೃಹಗಳು ತೆರೆದಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೊಬಸ್ತ್ ಕೈಗೊಂಡಿದ್ದರು. ಅಂಚೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಪರಿಣಾಮ ಗ್ರಾಹಕರಿಗೆ ಅಂಚೆ ಬಡವಾಡೆ ಆಗಲಿಲ್ಲ.

ಆಲ್‌ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬೆಳಿಗ್ಗೆ  ನವನಗರದ ಎಲ್ಐಸಿ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !