ನಗರದಲ್ಲಿ ಮತ್ತೆ ಅಕಾಲಿಕ ಮಳೆ

7

ನಗರದಲ್ಲಿ ಮತ್ತೆ ಅಕಾಲಿಕ ಮಳೆ

Published:
Updated:
Prajavani

ಚಿಕ್ಕಬಳ್ಳಾಪುರ: ನಗರದ ಸುತ್ತಮುತ್ತ ಶನಿವಾರ ಸಂಜೆ ಗುಡುಗು ಸಹಿತ ಅಕಾಲಿಕ ಮಳೆ ಸುರಿದು, ತಂಪು ಎರೆಯಿತು.

ಸಂಜೆ 5.10 ಸುಮಾರಿಗೆ ಕಾಣಿಸಿಕೊಂಡ ಮಳೆ ಅರ್ಧ ಗಂಟೆಗಳ ಕಾಲ ಜೋರಾಗಿ ಸುರಿದ ಮಳೆ ಜಳದಿಂದ ಪರಿತಪಿಸುತ್ತಿದ್ದವರಿಗೆ ನೆಮ್ಮದಿ ತಂದರೆ, ಹೂವು, ಹಿಪ್ಪುನೆರಳೆ, ಆಲೂಗಡ್ಡೆ, ಮೇವು ಬೆಳೆಯುವವರ ಮೊಗದಲ್ಲಿ ಸಂತಸ ಮೂಡಿಸಿತು.

‘ಅತಿಯಾದ ಉಷ್ಣತೆ ಕಾರಣಕ್ಕೆ ಅಲ್ಲಲ್ಲಿ ಸ್ಥಳೀಯವಾಗಿ ಮಳೆಯಾಗುತ್ತಿದೆ. ಭಾನುವಾರ ಸಹ ಮಳೆಯಾಗುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್‌.ಪಾಟೀಲ ತಿಳಿಸಿದರು. ಜ.27 ರಂದು ಸಹ ನಗರದಲ್ಲಿ ಮಳೆಯಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !