ಸಿಇಟಿ ದೇಶಕ್ಕೆ ಮಾದರಿ: ಮೊಯಿಲಿ

ಸೋಮವಾರ, ಮಾರ್ಚ್ 25, 2019
26 °C
ಅನಾದ್ಯಂತ-2019ಕ್ಕೆ ಚಾಲನೆ ನೀಡಿದ ವೀರಪ್ಪ ಮೊಯಿಲಿ

ಸಿಇಟಿ ದೇಶಕ್ಕೆ ಮಾದರಿ: ಮೊಯಿಲಿ

Published:
Updated:
Prajavani

ಯಲಹಂಕ: ಇಡೀ ದೇಶಕ್ಕೇ ಮಾದರಿ ಏನಿಸುವಂತೆ, ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಅಳವಡಿಸಿದ್ದರಿಂದ ಮಾಹಿತಿ ತಂತ್ರಜ್ಞಾನ ಹಾಗೂ ಇತರ ಕ್ಷೇತ್ರಗಳಿಗೆ ಅಗತ್ಯವಿರುವ ತಂತ್ರಜ್ಞರನ್ನು ಅತ್ಯಧಿಕ ಸಂಖ್ಯೆಯಲ್ಲಿ ಒದಗಿಸಲು ಸಾಧ್ಯವಾಯಿತು’ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಅನಾದ್ಯಂತ-2019 ತಂತ್ರಜ್ಞಾನ-ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಇಂದು ಇಡೀ ಜಗತ್ತಿಗೆ ಪ್ರತಿಭಾವಂತ ತಂತ್ರಜ್ಞರನ್ನು ಪೂರೈಸುವ ರಾಜ್ಯಗಳಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ಲಭಿಸಿರುವುದು ಹೆಮ್ಮೆಯ ಸಂಗತಿ’ ಎಂದರು.

ಕಲೆ ಮತ್ತು ತಂತ್ರಜ್ಞಾನಗಳು ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಪರಸ್ಪರ ಮೇಳೈಸಿದಾಗಲೇ ಆ ವ್ಯಕ್ತಿತ್ವಕ್ಕೆ ಪರಿಪೂರ್ಣತೆಯ ಆಯಾಮ ಲಭಿಸುತ್ತದೆ. ನಮ್ಮೊಳಗೆ ಸುಪ್ತವಾಗಿರುವ ಐದು ಸಾವಿರ ವರ್ಷಗಳ ಶ್ರೀಮಂತ ಪರಂಪರೆಯ ಶ್ರೇಷ್ಠ ಸಂಗತಿಗಳನ್ನು ಜಗತ್ತಿಗೆ ಪರಿಚಯಿಸಲು ಸಾಧ್ಯವಾಗುತ್ತದೆ’ ಎಂದರು.

ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳು ಹೆಚ್ಚು ಪ್ರಶ್ನೆಗಳನ್ನು ಕೇಳಿ ತಾವು ಕಲಿಯುವ ವಿಷಯದ ಸ್ಪಷ್ಟನೆ ಪಡೆಯುವಂತೆ ಬೋಧನಾಕ್ರಮವನ್ನು ಬದಲಾಯಿಸಬೇಕಾದ ಅಗತ್ಯವಿದೆ’ ಎಂದರು.

ಮೂರು ದಿನಗಳ ಕಾಲ ನಡೆಯುವ  ‘ಅನಾದ್ಯಂತ’ ಕಾರ್ಯಕ್ರಮದಲ್ಲಿ 41 ತಾಂತ್ರಿಕ ಕಾಲೇಜುಗಳ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಪ್ಯಾಷನ್ ಷೋ, ಕೋರಿಯೋನೈಟ್, ಬ್ಯಾಟಲ್ ಆಫ್ ಬ್ಯಾಂಡ್ಸ್, ಸ್ಟ್ರೀಟ್ ಡ್ಯಾನ್ಸ್, ರೋಬೋವಾರ್ಸ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಾರ್ಚ್‌ 9ರಂದು ಅನುಷಾ ಹೆಗ್ಡೆ ಮತ್ತು ಗಿರೀಶ್ ಪ್ರಭು ಸಂಗಡಿಗರು ಸಂಗೀತ, ಬಾಲಿವುಡ್ ಗಾಯಕಿ ಸುನಿಧಿ ಚವ್ಹಾಣ ಅವರ ಗೀತೆಗಳ ಜೊತೆಗೆ ಕೆನಡಾದ ಡಿಜೆ ತಾರಾ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವಾಲಿವಾಲ್, ಥ್ರೋಬಾಲ್, ಬ್ಯಾಡ್ಮಿಂಟನ್ ಹಾಗೂ ಬ್ಯಾಸ್ಕೆಟ್‌ಬಾಲ್‌ ಕ್ರೀಡೆಗಳೂ ಜರುಗಲಿವೆ ಎಂದು ಪ್ರಾಂಶುಪಾಲ ಡಾ.ಎಚ್.ಸಿ.ನಾಗರಾಜ್ ಮಾಹಿತಿ ನೀಡಿದರು.

ಚಲನಚಿತ್ರ ನಟ ಗರುಡ ರಾಂ,ಉತ್ಸವದ ಸಂಯೋಜಕ ಪ್ರೊ.ಎಂ.ಎನ್.ತಿಪ್ಪೇಸ್ವಾಮಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !