ಏಷ್ಯನ್ ಅಥ್ಲೆಟಿಕ್ಸ್: ನೀರಜ್, ಹಿಮಾ ಆಯ್ಕೆ

ಸೋಮವಾರ, ಏಪ್ರಿಲ್ 22, 2019
29 °C

ಏಷ್ಯನ್ ಅಥ್ಲೆಟಿಕ್ಸ್: ನೀರಜ್, ಹಿಮಾ ಆಯ್ಕೆ

Published:
Updated:
Prajavani

ನವದೆಹಲಿ: ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಮುಂದಿನ ತಿಂಗಳು ದೋಹಾದಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸುವರು.

ಭಾರತೀಯ ಅಮೆಚೂರ್ ಅಥ್ಲೆಟಿಕ್ಸ್ ಸಂಸ್ಥೆಯು ಬುಧವಾರ ಒಟ್ಟು 39 ಅಥ್ಲೀಟ್‌ಗಳ ತಂಡವನ್ನು ಪ್ರಕಟಿಸಿದೆ. ಅದರಲ್ಲಿ ಮಹಿಳೆಯರ 400 ಮೀಟರ್ಸ್‌ ವಿಭಾಗದ ಅಥ್ಲೀಟ್ ಹಿಮಾ ದಾಸ್ ಕೂಡ ಇದ್ದಾರೆ.

ನೀರಜ್ ಚೋಪ್ರಾ ಅವರು ಹೋದ ಬಾರಿಯ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. 21 ವರ್ಷದ  ನೀರಜ್ ದಕ್ಷಿಣ ಆಫ್ರಿಕಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ದಾಖಲೆ ಹೊಂದಿರುವ ಮೊಹಮ್ಮದ್ ಅನಾಸ್ (440 ಮೀ ಓಟ), ಜಿನ್ಸನ್ ಜಾನ್ಸನ್ (800 ಮೀ ಮತ್ತು 1500 ಮೀ), ಧರುಣ್ ಅಯ್ಯಸಾಮಿ (400 ಮೀ ಹರ್ಡಲ್ಸ್), ಅವಿನಾಶ್ ಸಬ್ಲೆ (3000 ಮೀ ಸ್ಟೀಪಲ್‌ಚೇಸ್), ತೇಜಿಂದರ್ ಪಾಲ್ ಸಿಂಗ್ ತೂರ್ (ಶಾಟ್‌ಪಟ್), ದ್ಯುತಿ ಚಾಂದ್ (100 ಮೀ ಓಟ), ಅನು ರಾಣಿ (ಜಾವೆಲಿನ್ ಥ್ರೋ) ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತೇಜಸ್ವನಿ ಶಂಕರ್ (ಹೈಜಂಪ್) ಮತ್ತು ಎಂ. ಶ್ರೀಶಂಕರ್ (ಲಾಂಗ್‌ಜಂಪ್) ಅವರನ್ನು ಕೈಬಿಡಲಾಗಿದೆ. ಸೀಮಾ ಅಂಟಿಲ್ (ಡಿಸ್ಕಸ್ ಥ್ರೋ) ಮತ್ತು ಅರ್ಪಿಂದರ್ ಸಿಂಗ್ (ಟ್ರಿಪಲ್ ಜಂಪ್) ಅವರು ವಿಶ್ರಾಂತಿ ಪಡೆದುಕೊಂಡಿದ್ದಾರೆ.

ಈಚೆಗೆ ಉದ್ದೀಪನ ಮದ್ದು ಸೇವನೆಯ ಆರೋಪ ಎದುರಿಸಿದ್ದ ಸಂಜೀವಿನಿ ಜಾಧವ್ (10000ಮೀ ಓಟ) ಅವರೂ ತಂಡದಲ್ಲಿದ್ದಾರೆ.  ಅವರನ್ನು ನಾಡಾ ತಾತ್ಕಾಲಿಕ ಅಮಾನತು ಮಾಡಿರಲಿಲ್ಲ. ಅಲ್ಲದೇ ಈಚೆಗೆ ಮುಕ್ತಾಯವಾದ ಫೆಡರೇಷನ್ ಅಥ್ಲೆಟಿಕ್ಸ್‌ನಲ್ಲಿ  ಚಿನ್ನದ ಪದಕ ಗೆದ್ದಿದ್ದರು. ಅಧ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಲಾಗಿದೆ. ನಾಡಾದ ಸೂಚನೆಗಾಗಿ ಕಾಯಲಾಗುತ್ತಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಹಿಮಾಗೆ ಪರೀಕ್ಷೆಯ ಒತ್ತಡ: ಜೂನಿಯರ್ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಹಿಮಾ ದಾಸ್ ಅವರು ಹೋದ ತಿಂಗಳು ತಮ್ಮ 12ನೇ ತರಗತಿಯ ಪರೀಕ್ಷೆಗಾಗಿ ವಿಶ್ರಾಂತಿ ಪಡೆದಿದ್ದರು. ಇದರಿಂದಾಗಿ ಅವರು ಇತ್ತೀಚೆಗೆ ಮತ್ತೆ ಟ್ರ್ಯಾಕ್‌ಗೆ ಮರಳಿದ್ದರು. ಫೆಡ್‌ ಕಪ್ ಅಥ್ಲೆಟಿಕ್ಸ್‌ನಲ್ಲಿ ಅವರು ತಮ್ಮ ದಾಖಲೆಯ ಸಮಯವನ್ನು ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಅವರು ಚಿನ್ನದ ಪದಕ ಗಳಿಸಿದ್ದರು. ಇದರಿಂದಾಗಿ ಅವರಿಗೆ ತಂಡದಲ್ಲಿ ಅವಕಾಶ ಲಭಿಸಿದೆ.

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !