‘ಬಸವ ಜ್ಯೋತಿ’, ‘ಬಸವರತ್ನ‘ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ವಿಜಯಪುರ ತಾಲ್ಲೂಕಿನ ಆಹೇರಿ ಗ್ರಾಮದ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಂದ ‘ಬಸವ ಜ್ಯೋತಿ’ ರಾಜ್ಯ ಪ್ರಶಸ್ತಿ ಮತ್ತು ‘ಬಸವರತ್ನ ರಾಷ್ಟ್ರೀಯ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಿದೆ.
ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆ, ಶಿಕ್ಷಣ, ಶಿಲ್ಪಕಲೆ, ಸಂಗೀತ, ಕಲೆ, ಕ್ರೀಡೆ, ಚಿತ್ರಕಲೆ, ಚಲನಚಿತ್ರ, ಪರಿಸರ ಸಂರಕ್ಷಣೆ, ಪತ್ರಿಕೋದ್ಯಮ, ಜಾನಪದ, ಯಕ್ಷಗಾನ, ನಾಟಕ, ರಂಗಭೂಮಿ, ಭರತನಾಟ್ಯ, ಕೃಷಿ, ತೋಟಗಾರಿಕೆ, ಕೃಷಿ ಸಂಶೋಧನೆ, ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ತಾಂತ್ರಿಕ, ಪಶುವೈದ್ಯಕೀಯ ಬರಹ, ವೈದ್ಯಕೀಯ, ಛಾಯಾಗ್ರಹಣ, ಸಾರಿಗೆ, ಗ್ರಾಮೀಣಾಭಿವೃದ್ಧಿ, ದೂರದರ್ಶನ ಮಾಧ್ಯಮ, ಕನ್ನಡ ರಕ್ಷಣೆ, ಹೈನುಗಾರಿಕೆ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ಮತ್ತು ಸಂಘ, ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು.
ಸಾಧಕರು ತಮ್ಮ ಸಾಧನೆಯ ದಾಖಲಾತಿಗಳೊಂದಿಗೆ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಮೂರು ಭಾವಚಿತ್ರಗಳೊಂದಿಗೆ ಮೇ 5ರ ಒಳಗೆ ಬಂಡೆಪ್ಪ ಜಿ ತೇಲಿ, ಅಧ್ಯಕ್ಷರು, ಬಸವ ಸಾಹಿತ್ಯ ವೇದಿಕೆ ಆಹೇರಿ–586112, ಜಿ, ತಾ. ವಿಜಯಪುರ ಈ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು. ಪ್ರತಿ ವರ್ಷದಂತೆ ವೇದಿಕೆಯು ಆಯೋಜಿಸುವ ವಚನ ವಿಜಯೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮಾಹಿತಿಗೆ 9008845750 ಸಂಪರ್ಕಿಸಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.