ಬುಧವಾರ, ಸೆಪ್ಟೆಂಬರ್ 18, 2019
21 °C

ಪ್ರಧಾನಿ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ: ಕಾಂಗ್ರೆಸ್‌

Published:
Updated:

ನವದೆಹಲಿ: ಸಂಖ್ಯಾ ಬಲವು ತನ್ನ ಪರವಾಗಿದ್ದರೆ ಪ್ರಧಾನಿ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್‌ ಹೇಳಿದೆ. ಮುಂದಿನ ಸರ್ಕಾರದ ನಾಯಕತ್ವಕ್ಕಾಗಿ ಪಕ್ಷವು ಹಟ ಹಿಡಿಯವುದಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್ ಅವರು ಹೇಳಿಕೆ ನೀಡಿದ ಮರುದಿನವೇ ಈ ಸ್ಪಷ್ಟೀಕರಣ ಹೊರಬಿದ್ದಿದೆ.

ಪ್ರಧಾನಿ ಹುದ್ದೆಯನ್ನು ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಡಲು ಸಿದ್ಧ ಎಂಬ ಅರ್ಥದಲ್ಲಿ ಆಜಾದ್‌ ನೀಡಿದ ಹೇಳಿಕೆಯು ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ, ‘ಅತ್ಯಂತ ದೊಡ್ಡ ಪಕ್ಷಕ್ಕೆ ಸರ್ಕಾರದ ನಾಯಕತ್ವ ದೊರೆಯಬೇಕು’ ಎಂದು ಹೇಳುವ ಮೂಲಕ ಈ ಚರ್ಚೆಯನ್ನು ಕಾಂಗ್ರೆಸ್‌ ಕೊನೆಗೊಳಿಸಿದೆ. 

‘ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಅತ್ಯಂತ ದೊಡ್ಡ ಪಕ್ಷವು ಸರ್ಕಾರದ ನಾಯಕತ್ವ ವಹಿಸುವುದು ಸಹಜ’ ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ. 

Post Comments (+)