ಶುಕ್ರವಾರ, ಜೂನ್ 25, 2021
21 °C

ಅಮರನಾಥ ಯಾತ್ರೆ: ಅಡುಗೆ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಅಮರನಾಥ ಯಾತ್ರಿಕರಿಗೆ ಆಹಾರ ತಯಾರಿಸುವ ಅಡುಗೆ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಠಾನ್‌ಕೋಟ್‌–ಜಮ್ಮು–ಬಾಲ್ತಾಲ್ ಹೆದ್ದಾರಿ ಪಕ್ಕದ ಅಡುಗೆ ಮನೆಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದಿದ್ದಾರೆ.

ಜಮ್ಮುವಿನ 17 ಸ್ಥಳಗಳಲ್ಲಿ 105, ಕತುವಾದಲ್ಲಿ 8, ಉಧಾಂಪುರದಲ್ಲಿ 10 ಮತ್ತು ರಾಂಬಾನ್‌ ಜಿಲ್ಲೆಯಲ್ಲಿ 28 ಅಡುಗೆ ಮನೆಗಳಲ್ಲಿ ಯಾತ್ರಿಕರಿಗೆ ಆಹಾರ ಸಿದ್ಧಗೊಳ್ಳಲಿದೆ ಎಂದು ಹೇಳಿದ್ದಾರೆ.

17 ಸ್ಥಳಗಳಲ್ಲಿ ಮೊಬೈಲ್‌ ಶೌಚಾಲಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದಿದ್ದಾರೆ. ಜುಲೈ 1ರಂದು ಆರಂಭವಾಗಲಿರುವ ಅಮರನಾಥ ಯಾತ್ರೆಯು ಆಗಸ್ಟ್‌ 15ಕ್ಕೆ ಕೊನೆಗೊಳ್ಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು