ಬ್ಯಾಂಕಿಂಗ್‌ ವಂಚನೆ ಹೆಚ್ಚಳ: ₹71,500 ಕೋಟಿಗೆ ಏರಿಕೆ

ಮಂಗಳವಾರ, ಜೂನ್ 18, 2019
24 °C
2018–19ರಲ್ಲಿ ವಂಚನೆ ಮೊತ್ತ ಶೇ 73ರಷ್ಟು ಏರಿಕೆ

ಬ್ಯಾಂಕಿಂಗ್‌ ವಂಚನೆ ಹೆಚ್ಚಳ: ₹71,500 ಕೋಟಿಗೆ ಏರಿಕೆ

Published:
Updated:

ನವದೆಹಲಿ (ಪಿಟಿಐ): ದೇಶದಲ್ಲಿ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇವೆ ಎನ್ನುವ ಅಂಶ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವರದಿಯಿಂದ ತಿಳಿದುಬಂದಿದೆ.

2018–19ರಲ್ಲಿ ಬ್ಯಾಂಕಿಂಗ್‌ ವಂಚನೆ ಮೊತ್ತದಲ್ಲಿ ಶೇ 73ರಷ್ಟು ಏರಿಕೆಯಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾಗಿರುವ ಪ್ರಶ್ನೆಗೆ ಆರ್‌ಬಿಐ ಪ್ರತಿಕ್ರಿಯೆ ನೀಡಿದೆ.

ವಾಣಿಜ್ಯ ಬ್ಯಾಂಕ್‌ಗಳು ಮತ್ತು ಕೆಲವು ಹಣಕಾಸು ಸಂಸ್ಥೆಗಳಲ್ಲಿ ವಂಚನೆ ನಡೆದಿದೆ. 11 ಹಣಕಾಸು ವರ್ಷಗಳಲ್ಲಿ 53,334 ಪ್ರಕಣಗಳಲ್ಲಿ ಒಟ್ಟಾರೆ ₹ 2.05 ಲಕ್ಷ ಕೋಟಿ ಮತ್ತದ ವಂಚನೆ ನಡೆದಿದೆ.

‘ಬ್ಯಾಂಕ್‌ಗಳಲ್ಲಿ ನಡೆದಿರುವ ವಂಚನೆಗಳ ಬಗ್ಗೆ ತನಿಖಾ ಸಂಸ್ಥೆಗಳಿಗೆ ದೂರು ನೀಡಬೇಕು. ವಂಚನೆ ವಿರುದ್ಧ ತೆಗೆದುಕೊಂಡಿರುವ ಅಥವಾ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ’ ಎಂದು ಆರ್‌ಬಿಐ ತಿಳಿಸಿದೆ.

ವಜ್ರದ ಉದ್ಯಮಿ ನೀರವ್ ಮೋದಿ ಹಾಗೂ ಮದ್ಯದ ದೊರೆ ವಿಜಯ್‌ ಮಲ್ಯ ಅವರನ್ನೂ ಒಳಗೊಂಡು ಭಾರಿ ಮೊತ್ತದ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಇಬ್ಬರೂ ದೇಶಬಿಟ್ಟು ಓಡಿಹೋಗಿದ್ದಾರೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ತನಿಖಾ ಸಂಸ್ಥೆಗಳು ಭಾರಿ ಮೊತ್ತದ ವಂಚನೆ ಪ್ರಕರಣಗಳನ್ನು ತನಿಖೆ ನಡೆಸುತ್ತಿವೆ.

ವಂಚನೆಯ ವರ್ಗಿಕರಣ: ಕೇಂದ್ರೀಯ ವಿಚಕ್ಷಣ ಆಯೋಗವು (ಸಿವಿಸಿ) 13 ರೀತಿಯಲ್ಲಿ ವಂಚನೆಯ ವರ್ಗೀಕರಣ ಮಾಡಿದೆ. ಹರಳು ಮತ್ತು ಚಿನ್ನಾಭರಣ, ತಯಾರಿಕೆ ಮತ್ತು ಕೈಗಾರಿಕೆ, ಕೃಷಿ, ಮಾಧ್ಯಮ, ವಿಮಾನಯಾನ, ಸೇವೆ, ಯೋಜನೆಗಳು, ವ್ಯಾಪಾರ, ಮಾಹಿತಿ ತಂತ್ರಜ್ಞಾನ, ರಫ್ತು ವಹಿವಾಟು, ನಿಶ್ಚಿತ ಠೇವಣಿ, ಬೇಡಿಕೆ ಸಾಲ, ಸಾಲಕ್ಕೆ ಖಾತರಿ, ಚೆಕ್‌ ಡಿಸ್ಕೌಂಟ್‌.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !