ನಿಫಾ ವೈರಸ್ ಆತಂಕ ಬೇಡ, ಕೇಂದ್ರ ಸರ್ಕಾರ ನಿಮ್ಮ ಜೊತೆಗಿದೆ: ಪ್ರಧಾನಿ ಅಭಯ

ಬುಧವಾರ, ಜೂನ್ 19, 2019
29 °C

ನಿಫಾ ವೈರಸ್ ಆತಂಕ ಬೇಡ, ಕೇಂದ್ರ ಸರ್ಕಾರ ನಿಮ್ಮ ಜೊತೆಗಿದೆ: ಪ್ರಧಾನಿ ಅಭಯ

Published:
Updated:

ಗುರುವಾಯೂರು: ನಿಫಾ ವೈರಸ್ ಬಂದಿದೆ ಎಂದು ಕೇರಳ ರಾಜ್ಯ ಆತಂಕಕ್ಕೆ ಒಳಗಾಗುವುದು ಬೇಡ. ಕೇಂದ್ರ ಸರ್ಕಾರ ನಿಮ್ಮ ಜೊತೆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೇರಳ ಜನರಿಗೆ ಅಭಯ ನೀಡಿದ್ದಾರೆ.

ಇಲ್ಲಿನ ಗುರುವಾಯೂರಿನ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸೋಂಕು ಎರಡನೇ ಬಾರಿಗೆ ಇಲ್ಲಿ ಕಾಣಿಸಿಕೊಂಡಿದೆ. ಇದಕ್ಕಾಗಿ ಭಯಪಡುವ ಅವಶ್ಯಕತೆ ಇಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಟ್ಟಾಗಿ ಈ ಸೋಂಕಿನ ವಿರುದ್ಧ ಹೋರಾಡಲಿವೆ. ಸೋಂಕಿನ ಕುರಿತು ಈ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕೇಂದ್ರ ಗಮನಿಸುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಮಾಲ್ಡೀವ್ಸ್‌ ಅತ್ಯುನ್ನತ ಗೌರವ​

ಕೇರಳದಿಂದಲೇ ನವಭಾರತ ನಿರ್ಮಾಣದ ವಾಗ್ದಾನ: ಈ ಗುರುವಾಯೂರಿನಿಂದಲೇ ನವ ಭಾರತ ನಿರ್ಮಾಣ ಮಾಡುವುದಾಗಿ ನಾನು ವಾಗ್ದಾನ ಮಾಡುತ್ತೇನೆ. ಭಾರತದ ಪ್ರಜಾಪ್ರಭುತ್ವವನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಒಳ್ಳೆಯತನ ಗೆದ್ದಿದೆ. ಋುಣಾತ್ಮಕ ಅಂಶಗಳು ಹೀನಾಯ ಸೋಲು ಕಂಡಿವೆ. ನಾವು ಸಕಾರಾತ್ಮಕ ಅಂಶಗಳ ಕಡೆಗೆ ಸಾಗೋಣ. 130 ಕೋಟಿ ಜನರಿಗಾಗಿ ನಾವು ಕೆಲಸ ಮಾಡೋಣ ಎಂದು ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ವಾರಣಾಸಿಗಿಂತ ಕೇರಳ ನನ್ನ ನೆಚ್ಚಿನ ರಾಜ್ಯ: ಯಾರು ನಮ್ಮನ್ನು ಗೆಲ್ಲಲೆಂದು ಮತ ಹಾಕಿದ್ದಾರೋ ಅವರೂ ನಮ್ಮವರೆ, ಯಾರು ನಮ್ಮನ್ನು ಗೆಲ್ಲಬಾರದೆಂದು ಪ್ರಯತ್ನಿಸಿದರೋ ಅವರೂ ನಮ್ಮವರೇ ಎಂದು ಮೋದಿ ಹೇಳಿದ್ದಾರೆ. ಬಿಜೆಪಿ ಸಾಧನೆ ಏನೂ ಇಲ್ಲದಿದ್ದರೂ ಮೋದಿ ಯಾಕೆ ಕೇರಳವನ್ನು ಆಯ್ಕೆ ಮಾಡಿಕೊಂಡರು ಎಂದು ಕೇಳಬಹುದು. ಯಾಕೆಂದರೆ, ವಾರಣಾಸಿಗಿಂತ ಕೇರಳವೇ ನನ್ನ ಮೆಚ್ಚಿನ ರಾಜ್ಯ ಎಂದು ಮೋದಿ ಹೇಳಿದ್ದಾರೆ.

 ಇದನ್ನೂ ಓದಿ: ಕೇರಳ | ಕೃಷ್ಣ ದೇವಾಲಯದಲ್ಲಿ ಮೋದಿ ತಾವರೆ ತುಲಾಭಾರ ಸೇವೆ

ನಾವು ಇಡೀ ದೇಶದ ಜನತೆಗಾಗಿ ಕೆಲಸ ಮಾಡಬೇಕಿದೆ. ಈ ಬಾರಿ ನಮಗೆ ದೊರೆತ ಸ್ಥಾನದಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಇದು ಪ್ರಜಾಪ್ರಭುತ್ವದ ಉತ್ಸವ ಎಂದು ಬಣ್ಣಿಸಿ, ಮತ ನೀಡಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು. ಜನತೆಗೆ ನನ್ನ ನಮನಗಳು, ಜನರೇ ನನ್ನ ದೇವರು. ನಾನು ಎಲ್ಲರ ಸೇವಕ, ಈ ಸರ್ಕಾರ ಯಾವುದೇ ತಾರತಮ್ಯ ಮಾಡದೆ ಇಡೀ ದೇಶದ ಜನರಿಗಾಗಿ ಕೆಲಸ ಮಾಡುತ್ತದೆ. ಬಿಜೆಪಿ ಕಾರ್ಯಕರ್ತರು ಜನಸೇವಕರು. ಈ ಜನಸೇವಕರು ಕೇವಲ ಐದು ವರ್ಷದವರೆಗೆ ಮಾತ್ರ ಸೇವೆ ಮಾಡುವುದಿಲ್ಲ. ಇಡೀ ಜೀವನ ಪೂರ್ತಿ ಅವರು ಸೇವೆ ಮಾಡುತ್ತಾರೆ. ಅದಕ್ಕಾಗಿ ಅವರು ಜನಸೇವಕರು ಎಂದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಸಹೋದರ ಆಟೊ ಚಾಲಕನೇ?

ಕೇರಳದಲ್ಲಿ ಒಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೂರು ದಿನಗಳ ಭೇಟಿ ನೀಡಿ ರೋಡ್ ಶೋ ನಡೆಸುತ್ತಿದ್ದರೆ, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೇರಳದಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭೆಯ ಉಪಚುನಾವಣೆ ನಡೆಯಲಿದೆ.

ಇನ್ನಷ್ಟು...

ಫ್ಯಾಕ್ಟ್‌ಚೆಕ್ | ‘ಮೋದಿ ಮಸಾಲೆ’ ಆಗಿಲ್ಲ ‘ಕಾಂಗ್ರೆಸ್ ಕಡ್ಲೆಬೀಜ’​

ದೇಶದಲ್ಲಿ ವಿಷದ ಜತೆ ಹೋರಾಡುತ್ತಿದ್ದೇವೆ, ಮೋದಿಯೇ ಆ ವಿಷ: ರಾಹುಲ್‌ ಗಾಂಧಿ ಟೀಕೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !