ಶನಿವಾರ, ಏಪ್ರಿಲ್ 17, 2021
27 °C
ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ಕಸಾಯಿಖಾನೆ: ತಮಿಳುನಾಡಿನಲ್ಲೇ ಅಧಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲೇ ಅತಿಹೆಚ್ಚು ಕಸಾಯಿಖಾನೆಗಳು ಇರುವ ರಾಜ್ಯ ತಮಿಳುನಾಡು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದಕ್ಷಿಣ ಭಾರತದ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪರವಾನಗಿ ಪಡೆದ ಕಸಾಯಿಖಾನೆಗಳ ಮಾಹಿತಿಯನ್ನು ಕೇಂದ್ರ ಪಶುಸಂಗೋಪನೆ ಖಾತೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲ್ಯಾನ್ ಅವರು ರಾಜ್ಯಸಭೆಗೆ ನೀಡಿದ್ದಾರೆ.

ಪರವಾನಗಿ ಕಡ್ಡಾಯ

*ಕೇಂದ್ರ ಅಥವಾ ರಾಜ್ಯ ಸರ್ಕಾರಗಳೆರಡೂ ಪರವಾನಗಿ ನೀಡಬಹುದು

* ತಮಿಳುನಾಡಿನ 259 ಕಸಾಯಿಖಾನೆಗಳಿಗೆ ರಾಜ್ಯ ಒಪ್ಪಿಗೆ ನೀಡಿದೆ

*ಮಹಾರಾಷ್ಟ್ರದಲ್ಲಿ 71 ಕಸಾಯಿಖಾನೆಗಳಿಗೆ ರಾಜ್ಯ ಪರವಾಗಿ ನೀಡಿದೆ

* ಕೇಂದ್ರ ಸರ್ಕಾರವು ಅತಿಹೆಚ್ಚು ಸಂಖ್ಯೆಯಲ್ಲಿ ಅನುಮತಿ ನೀಡಿರುವ (50) ವಧಾಕೇಂದ್ರಗಳು ಉತ್ತರ ಪ್ರದೇಶದಲ್ಲಿವೆ

* ಉತ್ತರ ಪ್ರದೇಶದ ಬಿಜೆಪಿ ಆಡಳಿತದಲ್ಲಿ ಕಸಾಯಿಖಾನೆಗಳಿಗೆ ಪ್ರಾಣಿಗಳನ್ನು ಸಾಗಿಸುವುದು ರೈತರಿಗೆ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ

 * ಪ್ರಧಾನಿ ಮೋದಿ ಅವರ ಹಿಂದಿನ ಸರ್ಕಾರದಲ್ಲಿ ಗೋಸಂರಕ್ಷಣೆ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು

* ವಧಾಕೇಂದ್ರಗಳ ಕಾರ್ಯನಿರ್ವಹಣೆ, ಅಲ್ಲಿಗೆ ಪ್ರಾಣಿಗಳ ಸಾಗಣೆಯ ಮೂಲದ ಬಗ್ಗೆ ಕೇಂದ್ರ ಹೆಚ್ಚು ಒತ್ತು ನೀಡುತ್ತಿದೆ 

* ಭಾರತ–ಬಾಂಗ್ಲಾದೇಶ ಗಡಿಯ ಪ್ರಾಣಿಗಳ ಕಳ್ಳಸಾಗಣೆ ಅಂಕಿ–ಅಂಶಗಳು ಇದರಲ್ಲಿ ಸೇರಿಲ್ಲ

ಪೆಹ್ಲುಖಾನ್ ಪ್ರಕರಣ: 

ರಾಜಸ್ಥಾನದಲ್ಲಿ ಗೋಸಾಗಣೆ ಮಾಡಿದ ಆರೋಪದ ಮೇಲೆ 2017ರ ಏಪ್ರಿಲ್‌ನಲ್ಲಿ ಪೆಹ್ಲು ಖಾನ್ ಎಂಬವರ ಮೇಲೆ ಗುಂಪು ದಾಳಿ ನಡೆದಿತ್ತು. ಮೂರು ದಿನದ ಬಳಿಕ ಅವರು ಮೃತಪಟ್ಟಿದ್ದರು. ಪೊಲೀಸರು ಇತ್ತೀಚೆಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಪೆಹ್ಲು ಖಾನ್ ಮತ್ತವರ ಇಬ್ಬರ ಮಕ್ಕಳ ವಿರುದ್ಧವೂ ಆರೋಪ ಹೊರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು