ಮಹಿಳಾ ವಿವಿ: ಪಿಜಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಭಾನುವಾರ, ಜೂಲೈ 21, 2019
22 °C

ಮಹಿಳಾ ವಿವಿ: ಪಿಜಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Published:
Updated:

ಮಂಡ್ಯ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಬಿ.ಹೊಸೂರು ಕಾಲೊನಿಯ ಮಂಡ್ಯ ಹೊರಾವರಣ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ 2019–20ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿಗಳ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಂಎ ಕನ್ನಡ, ಇಂಗ್ಲಿಷ್‌, ಮಹಿಳಾ ಅಧ್ಯಯನ, ಎಂಎಸ್‌ಸಿ ಗಣಿತ ಹಾಗೂ ಎಂಕಾಂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕನ್ನಡ ಎಂಎಗೆ ಪ್ರವೇಶ ಪಡೆಯಲು ಇಚ್ಛಿಸುವವರು ಐಚ್ಛಿಕ ಕನ್ನಡ ಪದವಿ, ಇಂಗ್ಲಿಷ್‌ ಎಂಎಗೆ ಪ್ರವೇಶ ಪಡೆಯಲು ಇಚ್ಛಿಸುವವರು ಐಚ್ಛಿಕ ಇಂಗ್ಲಿಷ್‌ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಮಹಿಳಾ ಅಧ್ಯಯನ ಸ್ನಾತಕೋತ್ತರ ಪದವಿ ಪ್ರವೇಶ ಬಯಸುವವರು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ಎಂಎಸ್‌ಸಿ ಗಣಿತ ಪ್ರವೇಶಕ್ಕೆ ಐಚ್ಛಿಕವಾಗಿ ಗಣಿತ ವಿಷಯದಲ್ಲಿ ಬಿಎಸ್‌ಸಿ ಪೂರೈಸಿರಬೇಕು. ಎಂಕಾಂ ಪ್ರವೇಶ ಬಯಸುವವರು ಬಿಬಿಎ, ಬಿಕಾಂ, ಬಿಬಿಎಂ, ಬಿಸಿಎ ಪದವಿ ಪಡೆದಿರಬೇಕು. ಪ್ರವೇಶಕ್ಕೆ ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿನಿಯರು ಶೇ 50 ಅಂಕ ಗಳಿಸಿರಬೇಕು. ಒಬಿಸಿ ಶೇ 45, ಪ್ರವರ್ಗ 1, ಎಸ್‌ಸಿ, ಎಸ್‌ಟಿ ಸಮುದಾಯದವರು ಶೇ 40 ಅಂಕ ಗಳಿಸಿರಬೇಕು. ಎಲ್ಲಾ ಸ್ನಾತಕೋತ್ತರ ಪದವಿಗಳ ಅವಧಿ ಎರಡು ವರ್ಷ, ನಾಲ್ಕು ಸೆಮಿಸ್ಟರ್‌ ಆಗಿರುತ್ತದೆ. ಜುಲೈ 31 ಅರ್ಜಿ ಸಲ್ಲಿಸಲು ಕಡೆಯ ದಿನಾಂಕ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಆ.3ರವರೆಗೂ ಅವಕಾಶವಿದೆ.

‘ಮಂಡ್ಯ ಕೇಂದ್ರದಲ್ಲಿ ಉತ್ತಮ ಪ್ರಾಧ್ಯಾಪಕರಿದ್ದು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿನಿಯರಿಗೆ ಉತ್ತಮ ಗ್ರಂಥಾಲಯ–ಮಾಹಿತಿ ಕೇಂದ್ರ, ಕಂಪ್ಯೂಟರ್‌ ಲ್ಯಾಬ್‌, ವೈ–ಫೈ ಸೌಲಭ್ಯ, ಆಟದ ಮೈದಾನ, ಉಚಿತ ಬಿಸಿಎಂ ಹಾಸ್ಟೆಲ್‌ ಸೌಲಭ್ಯವಿದೆ’ ಎಂದು ಕೇಂದ್ರದ ವಿಶೇಷಾಧಿಕಾರಿ ಪ್ರೊ.ಎಚ್‌.ಎಂ.ಹೇಮಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ:08232 275668, ಮೊ: 9449662037, 9591339350 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !