ಬುಧವಾರ, ನವೆಂಬರ್ 13, 2019
21 °C

ಕಿರಿಯರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ: ಭಾರತಕ್ಕೆ ಮಣಿದ ಪಾಕಿಸ್ತಾನ

Published:
Updated:

ಮೊರಾಟುವಾ, ಶ್ರೀಲಂಕಾ (ಪಿಟಿಐ): ಅರ್ಜುನ್ ಆಜಾದ್ ಮತ್ತು ಎನ್‌.ಟಿ. ತಿಲಕ್ ವರ್ಮಾ ಅವರ ಆಕರ್ಷಕ ಶತಕಗಳ ಬಲದಿಂದ ಭಾರತ ಜೂನಿಯರ್ ತಂಡವು 19 ವರ್ಷದೊಳಗಿನವರ ಏಷ್ಯಾ ಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಜಯಿಸಿತು.

ಭಾರತದ ತಂಡವು 60 ರನ್‌ಗಳಿಂದ ಪಾಕಿಸ್ತಾನದ ವಿರುದ್ಧ ಜಯಿಸಿತು.  ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 305 ರನ್‌ ಗಳಿಸಿತು. ಅರ್ಜುನ್ (121; 111ಎಸೆತ, 11ಬೌಂಡರಿ, 4ಸಿಕ್ಸರ್‌)  ಮತ್ತು ತಿಲಕ್ (110; 119ಎಸೆತ, 10ಬೌಂಡರಿ, 1ಸಿಕ್ಸರ್) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 183 ರನ್‌ ಗಳಿಸಿ ತಂಡವು ದೊಡ್ಡ ಮೊತ್ತ ಪೇರಿಸಲು ಕಾರಣರಾದರು.

ಗುರಿ ಬೆನ್ನತ್ತಿದ  ಪಾಕ್ ಜೂನಿಯರ್ ತಂಡವು 46.4 ಓವರ್‌ಗಳಲ್ಲಿ 245 ರನ್ ಗಳಿಸಿ ಆಲೌಟ್ ಆಯಿತು. ನಾಯಕ ರೋಹೈಲ್ ಖಾನ್ ಶತಕ (117) ವ್ಯರ್ಥವಾಯಿತು. ಅಥರ್ವ್‌ ಅಂಕೋಲೆಕರ್ ಮೂರು ವಿಕೆಟ್ ಗಳಿಸಿ ಪಾಕ್ ಆಟಕ್ಕೆ ತಡೆಯೊಡ್ಡಿದರು.

ತಂಡದಲ್ಲಿರುವ ಕನ್ನಡಿಗ, ಮಧ್ಯಮವೇಗಿ ವಿದ್ಯಾಧರ್ ಪಾಟೀಲ ಮತ್ತು ಸುಶಾಂತ್ ಮಿಶ್ರಾ ಅವರು ತಲಾ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು

ಭಾರತ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 305 (ಅರ್ಜುನ್ ಆಜಾದ್ 121, ಎನ್‌.ಟಿ. ತಿಲಕ್ ವರ್ಮಾ 110, ನಸೀಮ್ ಷಾ 52ಕ್ಕೆ3, ಅಬ್ಬಾಸ್ ಅಫ್ರಿದಿ 72ಕ್ಕೆ3)

ಪಾಕಿಸ್ತಾನ: 46.4 ಓವರ್‌ಗಳಲ್ಲಿ 245 (ರೋಹೈಲ್ ಖಾನ್ 117, ಹ್ಯಾರಿಸ್ ಖಾನ್ 43, ಅಥರ್ವ್ ಅಂಕೋಲೆಕರ್ 36ಕ್ಕೆ3) ಫಲಿತಾಂಶ: ಭಾರತ ತಂಡಕ್ಕೆ 60 ರನ್ ಜಯ.

 

ಪ್ರತಿಕ್ರಿಯಿಸಿ (+)