ಶನಿವಾರ, ನವೆಂಬರ್ 23, 2019
17 °C
ಅ.17ರಂದು ಸುಪ್ರೀಂಕೋರ್ಟ್‌ನಲ್ಲಿ ಕೊನೆಯ ಕಲಾಪ; ನ.17ರಂದು ತೀರ್ಪು

ಕೊನೆ ಘಟ್ಟದಲ್ಲಿ ಅಯೋಧ್ಯೆ ವಿಚಾರಣೆ

Published:
Updated:

ನವದೆಹಲಿ: ಸುದೀರ್ಘ ಅವಧಿಯಿಂದ ಬಾಕಿಯಿರುವ ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ವಿಚಾರಣೆ ಅಂತಿಮ ಘಟ್ಟ ತಲುಪಿದ್ದು, ಸೋಮವಾರದಿಂದ ಕೊನೆಯ ಹಂತದ ವಿಚಾರಣೆ ಆರಂಭವಾಗಲಿದೆ. ನವೆಂಬರ್ 17ರಂದು ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಲಿದೆ.

ಒಂದು ವಾರದ ದಸರಾ ರಜೆಯ ಬಳಿಕ ಪ್ರಕರಣದ 38ನೇ ದಿನದ ಕಲಾಪ ನಡೆಯಲಿದೆ. ಪ್ರಕ್ರಿಯೆ ಪೂರ್ಣಗೊಳಿಸಲು ಅಕ್ಟೋಬರ್ 17ರ ಗಡುವು ನಿಗದಿಪಡಿಸಲಾಗಿದೆ.

ಮುಸ್ಲಿಂ ಅರ್ಜಿದಾರರು ಸೋಮವಾರ ವಾದ ಮಂಡಿಸಬೇಕಿದೆ. ಮುಂದಿನ ಎರಡು ದಿನಗಳನ್ನು ಹಿಂದೂ ಅರ್ಜಿದಾರರಿಗೆ ಮೀಸಲಿರಿಸಲಾಗಿದೆ. ಅ. 17ರಂದು ವಿಚಾರಣೆ ಅಂತಿಮಗೊಳ್ಳಲಿದ್ದು, ಅಂದು ಎರಡೂ ಕಡೆಯವರು ತಮ್ಮ ಕೊನೆಯ ವಾದವನ್ನು ಪೂರ್ಣಗೊಳಿಸಬೇಕಿದೆ. 

 

ಪ್ರತಿಕ್ರಿಯಿಸಿ (+)