ಸೋಮವಾರ, ಏಪ್ರಿಲ್ 12, 2021
31 °C

ನ್ಯಾಯಾಂಗದ ಮೇಲೆ ನಿಷ್ಠೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನ್ಯಾಯಾಂಗದ ಮೇಲೆ ನಿಷ್ಠೆ ಇಟ್ಟು ಸತ್ಯದ ಪರ ವಕೀಲರು ವಾದ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ, ಗುಲ್ಬರ್ಗ ಜಿಲ್ಲಾ ನ್ಯಾಯಾಂಗದ ಆಡಳಿತಾತ್ಮಕ ನ್ಯಾಯಮೂರ್ತಿ ಅಜಿತ್ ಜೆ. ಗುಂಜಾಳ ಹೇಳಿದರು.ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಹಾಗೂ ಗುಲ್ಬರ್ಗ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡ ಸಮಾರಂಭದಲ್ಲಿ ಶುಕ್ರವಾರ ಅವರು ‘ವಕೀಲರ ಕೊಠಡಿಗಳು ಮತ್ತು ಸಾಕ್ಷಿಗಳ ವಿರಾಮ ಕೊಠಡಿ’ಯ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.40 ವರ್ಷಗಳ ಹಿಂದೆ ತಂದೆ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಗುಲ್ಬರ್ಗ ಜಿಲ್ಲಾ ಕೋರ್ಟ್‌ಗೆ ಬರಲು ಮನಸ್ಸು ಸಂತೋಷವಾಗುತ್ತಿದೆ ಎಂದ ಅವರು, ಸತ್ಯದ ಮೇಲಿನ ಬದ್ಧತೆ. ಕಟ್ಟಕಡೆ ಮನುಷ್ಯನಿಗೂ ನ್ಯಾಯ ದೊರಕಿಸುವ ಪ್ರಯತ್ನಗಳಿಂದ ನ್ಯಾಯಾಂಗ ವ್ಯವಸ್ಥೆ ಮೇಲೆ ಜನತೆಗೆ ನಂಬಿಕೆ ಇನ್ನಷ್ಟು ಹೆಚ್ಚುತ್ತದೆ ಎಂದು ವಕೀಲರ ಕಿವಿಮಾತು ಹೇಳಿದರು.ಉತ್ತರ ಭಾರತದಲ್ಲಿನ ಕೆಲವು ನ್ಯಾಯಾಲಯಗಳಿಗೆ ಹೋಲಿಸಿದರೆ, ಕರ್ನಾಟಕವು ಸಾಕಷ್ಟು ಮುಂದಿದೆ. ಮೂಲಸೌಕರ್ಯದಲ್ಲಿ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಇದರ ಸದುಪಯೋಗವನ್ನು ಅರ್ಹ ಕಕ್ಷಿದಾರರಿಗೆ ಒದಗಿಸಲು ವಕೀಲರು ಶ್ರಮಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಹೇಳಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಸ್.ಬಿಳ್ಕಿ ಉಪಸ್ಥಿತರಿದ್ದರು.ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ನ್ಯಾಯಾಲಯ ಸಂಕೀರ್ಣದ ಅಭಿವೃದ್ಧಿಗೆ ಆಡಳಿತದಿಂದ ಆಗುವ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಗುಲ್ಬರ್ಗ ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ನಾಮದಾರ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಜಿ. ಮಠ ವಂದಿಸಿದರು. ಶಿವಕುಮಾರ ಜಿ. ಬೆಳಕೇರಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.