ಆಸಿಡ್‌ ಸುರಿದುಕೊಂಡು ಅಲ್ಜಿರಿಯಾ ಟಿ.ವಿ ನಿರ್ಮಾಪಕ ಆತ್ಮಹತ್ಯೆ

7

ಆಸಿಡ್‌ ಸುರಿದುಕೊಂಡು ಅಲ್ಜಿರಿಯಾ ಟಿ.ವಿ ನಿರ್ಮಾಪಕ ಆತ್ಮಹತ್ಯೆ

Published:
Updated:

ಅಲ್ಜಿರಿಯಾ: ವೇತನ ಸಿಕ್ಕಿಲ್ಲವೆಂದು ಹತಾಸೆಗೊಂಡಿದ್ದ ಅಲ್ಜಿರಿಯಾದ ಖಾಸಗಿ ಟಿ.ವಿ ಚಾನೆಲ್‌ ನಿರ್ಮಾಪಕರೊಬ್ಬರು ಮೈಮೇಲೆ ಆಸಿಡ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯೂಸೆಫ್‌ ಗೌಸೆಮ್‌ (61) ಮೃತಪಟ್ಟವರು. ಇದೇ ಜನವರಿ 7ರಂದು ಖಾಸಗಿ ಚಾನೆಲ್‌ ಡಿಸೈರ್‌ ಟಿ.ವಿ ಕಚೇರಿಯಲ್ಲಿ ಮೈಮೇಲೆ ಆಸಿಡ್‌ ಸುರಿದುಕೊಂಡಿದ್ದರು. 2017ರಲ್ಲಿ ಮಾಡಿದ ಸೋಪ್‌ ಒಪೆರಾ ಕಾರ್ಯಕ್ರಮಕ್ಕೆ ಟಿ.ವಿ ಚಾನೆಲ್‌ ಮಾಲೀಕ ಇನ್ನೂ ಹಣ ನೀಡಿಲ್ಲವೆಂದು ಅವರು ಆರೋಪಿಸಿದ್ದರು.

ತೀವ್ರ ಸುಟ್ಟ ಗಾಯಗಳಿಂದಾಗಿ ಎರಡು ವಾರಕ್ಕೂ ಹೆಚ್ಚು ಅವಧಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಗುರುವಾರ ಮೃತಪಟ್ಟಿದ್ದಾರೆ.

ಗೌಸೆಮ್‌ ಆತ್ಮಹತ್ಯೆಗೆ ವಿಷಾದ ವ್ಯಕ್ತಪಡಿಸಿರುವ ಡಿಸೈರ್‌ ಟಿ.ವಿ ಚಾನೆಲ್‌ ‘ವಾಣಿಜ್ಯ ವಿವಾದವೊಂದು ದುರದೃಷ್ಟವಶಾತ್‌ ನಾಟಕೀಯ ತಿರುವು ಪಡೆದುಕೊಂಡಿದೆ. ಗೌಸೆಮ್‌ ಅವರಿಗೆ ಸಲ್ಲಬೇಕಿದ್ದ ಬಾಕಿಯನ್ನು ಚಾನೆಲ್‌ನ ಹೊಸ ಮಾಲೀಕರಿಂದ ಕೊಡಿಸುವ ಭರವಸೆ ನೀಡಲಾಗಿತ್ತು’ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

 ಟಿ.ವಿ ಚಾನೆಲ್‌ ಮತ್ತು ಸಿನಿಮಾ ಕ್ಷೇತ್ರದಲ್ಲಿರುವ ನೂರಾರು ವೃತ್ತಿಪರರು ತಮ್ಮ ಕೆಲಸದಲ್ಲಿ ಅನುಭವಿಸುತ್ತಿರುವ ಹತಾಸೆ ಯೂಸೆಫ್‌ ಪ್ರಕರಣದಲ್ಲಿ ವ್ಯಕ್ತವಾಗಿದ್ದು, ಈ ಕ್ಷೇತ್ರದಲ್ಲಿರುವವರ ಆಕ್ರೋಶ ಹೆಚ್ಚುವಂತೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !