ಗುರುವಾರ , ಮೇ 19, 2022
22 °C

ಇರಾಕಿಗೂ ಬೀಸಿದ ಈಜಿಪ್ಟ್ ಬದಲಾವಣೆ ಗಾಳಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇರಾಕಿಗೂ ಬೀಸಿದ ಈಜಿಪ್ಟ್ ಬದಲಾವಣೆ ಗಾಳಿ!

ಬಾಗ್ದಾದ್, (ಐಎಎನ್‌ಎಸ್):  31 ವರ್ಷಗಳ ಕಾಲ ಈಜಿಪ್ಟ್‌ನಲ್ಲಿ    ನಿರಂಕುಶ ಆಡಳಿತ ನಡೆಸಿದ  ಸರ್ವಾಧಿಕಾರಿ  ಹೋಸ್ನಿ ಮುಬಾರಕ್ ಪದಚ್ಯುತಿಗೆ ಕಾರಣವಾದ ನಾಗರಿಕ ಕ್ರಾಂತಿಯ ಗಾಳಿ ಮಧ್ಯಪ್ರಾಚ್ಯ ಮತ್ತು ನೆರೆಯ ಇತರ ರಾಷ್ಟ್ರಗಳಿಗೂ ಹಬ್ಬತೊಡಗಿದೆ.ಈಗ ಇರಾಕ್‌ನಲ್ಲಿಯೂ ಬದಲಾವಣೆಯ ಗಾಳಿ ಬೀಸತೊಡಗಿದೆ. ನಾಗರಿಕ ಕ್ರಾಂತಿಯ ಕಿಡಿ ಸದ್ದಿಲ್ಲದೆ ಸಣ್ಣಗೆ ಹೊತ್ತ ತೊಡಗಿದೆ. ಫೇಸ್‌ಬುಕ್‌ನಂತಹ ಅಂತರ್ಜಾಲ ತಾಣ ಇದಕ್ಕೆ ವೇದಿಕೆಯಾಗಿದೆ.‘ಇರಾಕ್‌ನಲ್ಲಿಯ ಭ್ರಷ್ಟಾಚಾರ ಮತ್ತು ಪಂಥೀಯ ಮನೋಭಾವವನ್ನು ಕೊನೆಗಾಣಿಸಲು ಬೀದಿಗಿಳಿಯಿರಿ’ ಎಂಬ ಸಾವಿರಾರು ಒತ್ತಾಯ ಪೂರ್ವಕ ಘೋಷಣೆಗಳು ಶುಕ್ರವಾರ ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ.‘ಫೆಬ್ರುವರಿ 25-ಇರಾಕ್‌ನ ಜನರ ಆಕ್ರೋಶದ ದಿನ’ ಎಂಬ ತಲೆಬರಹ ಉಳ್ಳ ಪುಟದಲ್ಲಿ ‘ಬದಲಾವಣೆಗಾಗಿ ಬೀದಿಗಿಳಿಯಿರಿ’ ಎಂಬ ಉತ್ತೇಜಕ ಬರಹಗಳಿವೆ. ರಾಷ್ಟ್ರದಲ್ಲಿ ವ್ಯಾಪಕವಾಗಿರುವ ಭಷ್ಟಾಚಾರ ಮತ್ತು ವಿದ್ಯುತ್ ಕೊರತೆಯ ವಿರುದ್ಧ ರೋಸಿ ಹೋಗಿರುವ ನಾಗರಿಕರು ಈ ತಿಂಗಳ ಆರಂಭದಲ್ಲಿಯೇ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

 ಅನಾಮಿಕರು ಕರೆ ನೀಡಿರುವ ‘ಇರಾಕ್‌ನ ಜನರ ಆಕ್ರೋಶದ ದಿನ’ದಲ್ಲಿ ಭಾಗವಹಿಸದಂತೆ ಪ್ರಧಾನಿ ಮಲೀಕಿ ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.