ಶನಿವಾರ, ಜೂನ್ 19, 2021
22 °C

ಜಂಗಟೆ ಖಾತೆಯಲ್ಲಿ ಕೇವಲ ₨ 500!

ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚಿಕ್ಕೋಡಿ ತಾಲ್ಲೂಕಿನ ಬೋರಗಾಂವ ಗ್ರಾಮದ ಶ್ರೇಣಿಕ ಅಣ್ಣಾಸಾಬ ಜಂಗಟೆ ಅವರು ಶುಕ್ರವಾರ ಚುನಾವಣಾಧಿಕಾರಿ ದೀಪಾ ಚೋಳನ್ ಅವರಿಗೆ ಉಮೇದುವಾರಿಕೆ ಪತ್ರ ಸಲ್ಲಿಸಿದರು. Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚಿಕ್ಕೋಡಿ ತಾಲ್ಲೂಕಿನ ಬೋರಗಾಂವ ಗ್ರಾಮದ ಶ್ರೇಣಿಕ ಅಣ್ಣಾಸಾಬ ಜಂಗಟೆ ಅವರು ಶುಕ್ರವಾರ ಚುನಾವಣಾಧಿಕಾರಿ ದೀಪಾ ಚೋಳನ್ ಅವರಿಗೆ ಉಮೇದುವಾರಿಕೆ ಪತ್ರ ಸಲ್ಲಿಸಿದರು.ಪಿಯುಸಿ, ಹಾರ್ಟಿಕಲ್ಚರಲ್ ಡಿಪ್ಲೊಮಾ ಶಿಕ್ಷಣ ಪಡೆದಿರುವ ಜಂಗಟೆ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಘೋಷಣಾ ಪತ್ರದಲ್ಲಿ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಕೇವಲ ₨500 ಹೊಂದಿದ್ದಾಗಿ ನಮೂದಿಸಿದ್ದಾರೆ. ಅಲ್ಲದೇ ಅವರು ಟಾಟಾ ಎ.ಐ.ಜಿ. ವಿಮಾ ಕಂಪೆನಿಯಲ್ಲಿ ರೂ.5 ಲಕ್ಷ ಹೂಡಿಕೆ ಮಾಡಿದ್ದಾರೆ. ಇದನ್ನು ಹೊರತು ಪಡಿಸಿದರೆ ಶ್ರೇಣಿಕ ಜಂಗಟೆ ಅವರು ಯಾವುದೇ ರೀತಿಯ ಆಸ್ತಿಪಾಸ್ತಿಯನ್ನು ಘೋಷಿಸಿಕೊಂಡಿಲ್ಲ.

ಅವಿವಾಹಿತರಾಗಿರುವ ಜಂಗಟೆ ಅವರು ಭೂಮಿ, ಕಟ್ಟಡ ಮೊದಲಾದ ಸ್ಥಿರಾಸ್ತಿ ಹಾಗೂ ವಾಹನಗಳು, ಬೆಳ್ಳಿ–ಬಂಗಾರ ಆಭರಣಗಳಂತಹ ಚರಾಸ್ಥಿಗಳನ್ನೂ ಹೊಂದಿಲ್ಲ. ಯಾವುದೇ ಸಂಸ್ಥೆಗಳಿಂದ ಸಾಲ ಪಡೆದಿಲ್ಲ ಮತ್ತು ಸಾಲವನ್ನೂ ನೀಡಿಲ್ಲ ಎಂದು ಘೋಷಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.