ಫುಟ್‌ಬಾಲ್: ಡ್ರಾ ಪಂದ್ಯದಲ್ಲಿ ಎಚ್‌ಎಎಲ್

7

ಫುಟ್‌ಬಾಲ್: ಡ್ರಾ ಪಂದ್ಯದಲ್ಲಿ ಎಚ್‌ಎಎಲ್

Published:
Updated:

ಕಣ್ಣೂರು (ಪಿಟಿಐ): ಬೆಂಗಳೂರಿನ ಎಚ್‌ಎಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಐ-ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ವಿವಾ ಕೇರಳ ಎದುರು 1-1 ಗೋಲಿನಿಂದ ಡ್ರಾ ಮಾಡಿಕೊಂಡಿದ್ದಾರೆ. ವಿರಾಮದ ವೇಳೆಗೆ ಉಭಯ ತಂಡಗಳು ಯಾವುದೇ ಗೋಲು ಗಳಿಸಿರಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಎಚ್‌ಎಎಲ್ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಪರಿಣಾಮ 55ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಜೆ,ಮುರಳಿ ಗೋಲಾಗಿ ಪರಿವರ್ತಿಸಿದರು.ಆದರೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಕಾರಣ ವಿವಾ ತಂಡ 57ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿತು. ಆ ಶ್ರೇಯಸ್ಸು ಮಿಡ್‌ಫೀಲ್ಡರ್ ಅನಿಲ್ ಕುಮಾರ್‌ಗೆ ಸಲ್ಲಬೇಕು. ಪರಿಣಾಮ ಪಂದ್ಯ 1-1 ಸಮಬಲವಾಯಿತು. ಬಳಿಕ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದವು. ಎಚ್‌ಎಎಲ್ ಈ ಮೊದಲು ಬಲಿಷ್ಠ ಮೋಹನ್ ಬಾಗನ್ ಹಾಗೂ ಡುರ್ಯಾಂಡ್ ಕಪ್ ರನ್ನರ್ ಅಪ್ ಜೆಸಿಟಿ ತಂಡಕ್ಕೆ ಶಾಕ್ ನೀಡಿತ್ತು. ಬಳಿಕ ಮುಂಬೈ ಫುಟ್‌ಬಾಲ್ ಕ್ಲಬ್ ಎದುರು ಸೋಲು ಕಂಡಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry