ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

63ನೇ ವರ್ಷಕ್ಕೆ ಕಾಲಿರಿಸಿದ ರಜನಿಕಾಂತ್

Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಸೂಪರ್‌ಸ್ಟಾರ್ ರಜನಿಕಾಂತ್ ಅವರು ಈ ಶತಮಾನದ ವಿಶೇಷ ದಿನವಾದ (12.12.12) ಬುಧವಾರ 63ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ರಜನಿಕಾಂತ್ ಅವರ ಈ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.

ನಟ- ನಿರ್ದೇಶಕ ರಾಘವೇಂದ್ರ ಲಾರೆನ್ಸ್ ಮತ್ತು ಸಂಗೀತ ನಿರ್ದೇಶಕ ವಿಜಯ್ ಆಂಟನಿ ಅವರು, ರಜನಿ ಕುರಿತ ವಿಶೇಷ ಸಂಗೀತ- ದೃಶ್ಯ ಮಾಲಿಕೆಯನ್ನು ಹೊರತಂದಿದ್ದಾರೆ. ಟಿವಿ ವಾಹಿನಿಗಳು ರಜನಿ ಅವರ ಬಗ್ಗೆ ಕಾರ್ಯಕ್ರಮ ಸರಣಿಯನ್ನು ಮತ್ತು ಅವರ ನಟಿಸಿರುವ ಯಶಸ್ವಿ ಸಿನಿಮಾಗಳನ್ನು ಪ್ರಸಾರ ಮಾಡುತ್ತಿವೆ.

`ಎಫ್‌ಎಂ' ರೇಡಿಯೊಗಳು ಕೂಡ ರಜನಿ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ.
ಬೆಂಗಳೂರಿನ `ಬಿಟಿಎಸ್'ನಲ್ಲಿ ನಿರ್ವಾಹಕರಾಗಿದ್ದ ಶಿವಾಜಿ ರಾವ್ ಗಾಯಕವಾಡ್, ತಮ್ಮ ಅಭಿನಯ ಸಾಮರ್ಥ್ಯದಿಂದ `ರಜನಿಕಾಂತ್' ಆಗಿ ಪರಿವರ್ತನೆಯಾದ ಪರಿ ಅನನ್ಯವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT