ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಗೆ ಭವಿಷ್ಯವಿಲ್ಲ: ಸಂಸದ ಹೆಗಡೆ

Last Updated 23 ಜೂನ್ 2011, 6:40 IST
ಅಕ್ಷರ ಗಾತ್ರ

ಯಲ್ಲಾಪುರ: `ಕೃಷಿ, ತೋಟಗಾರಿಕೆ,  ಹೈನುಗಾರಿಕೆಯನ್ನು ಉದ್ಯಮವಾಗಿ ಕಂಡರೆ ಮಾತ್ರ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ~ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಅವರು ಇಲ್ಲಿನ ಎಪಿಎಂಸಿಯಲ್ಲಿ  ತೋಟಗಾರಿಕೆ ಇಲಾಖೆ, ಗೇರು ಅಭಿ ವೃದ್ಧಿ ನಿಗಮ, ಕದಂಬ ಫೌಂಡೇಶನ್ ಹಾಗೂ ಕ್ಯಾಡ್‌ಬರಿ ಸಂಸ್ಥೆ ಹಮ್ಮಿ ಕೊಂಡಿದ್ದ ಗೇರು, ಕೋಕೋ, ಶ್ರೀಗಂಧ ಮತ್ತಿತರ ಬೆಳೆಗಳ ಕುರಿತ ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾ ಡಿದರು.

ಭಾರತದಾದ್ಯಂತ ಶೇ. 1ಕ್ಕಿಂತ ಕಡಿಮೆ ಬೆಳೆಬೆಳೆಯುವ ಅಡಿಕೆಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಮಾತ್ರ ಬೇಡಿಕೆ ಇದ್ದು ಈ ಬೇಡಿಕೆ ಯಾವುದೇ ಸಂದರ್ಭ ದಲ್ಲೂ ಕೊನೆಯಾಗಬಹುದು. ಹೀಗಾಗಿ ಅಡಿಕೆಗೆ ಭವಿಷ್ಯ ವಿಲ್ಲವೆಂದ ಸಂಸದರು, ಅಡಿಕೆಯ  ಪರ್ಯಾಯ ಬೆಳೆಗಳ ಬಗ್ಗೆ ರೈತರು ಚಿಂತಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಗೇರು ಅಭೀವೃದ್ಧಿ ನಿಗಮದ ಅಧ್ಯಕ್ಷ ವಿನೋದ ಪ್ರಭು, ರಾಜ್ಯದ ಗೇರು ಸಂಸ್ಕರಣಾ ಘಟಕಗಳಿಗೆ ವಿದೇಶ ಗಳಿಂದ 1 ಲಕ್ಷ ಟನ್ ಗೇರು ಬೀಜ ಆಮದಾಗುತ್ತಿದೆ  ಎಂದರು. ಐಸಿಆರ್ ಚೇರಮನ್ ಡಾ. ಅಯ್ಯ ಪ್ಪನ್ ಮಾತನಾಡಿ, ಸೆಪ್ಟೆಂಬರ್ ತಿಂಗ ಳಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಕೇಂದ್ರ ವಾಗಿಸಿ ಕೃಷಿ, ತೋಟಗಾರಿಕೆಗೆ ಸಂಬಂಧಿ ಸಿದಂತೆ ಕಾರ್ಯಾಗಾರ ಹಮ್ಮಿಕೊಳ್ಳ ಲಾಗುವುದೆಂದು ತಿಳಿಸಿದರು.

ಶಾಸಕ ವಿ.ಎಸ್.ಪಾಟೀಲ್ ಅಧ್ಯ ಕ್ಷತೆ ವಹಿಸಿದ್ದರು.  ಜಿ.ಪಂ. ಸದಸ್ಯರಾದ ರಾಘವೇಂದ್ರ ಭಟ್ಟ, ಅನಂತ ನಾಗರ ಜಡ್ಡಿ, ಗೇರು ನಿಗಮದ ಡಿಎಫ್‌ಓ ಕೆ.ವಿ. ನಾಯ್ಕ, ಎಪಿಎಂಸಿ ಅಧ್ಯಕ್ಷ ರಾಮ ಚಂದ್ರ ಮುದ್ದೇಪಾಲ್,  ಉಪಸ್ಥಿತ ರಿದ್ದರು.  ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್‌ನಾಯ್ಕ ಮತ್ತು ಗೇರು ಅಭಿವೃದ್ಧಿ ನಿಗಮದ ಸತೀಶ ಹೆಗಡೆ ಉಪನ್ಯಾಸ ನೀಡಿದರು.

ರಾಘವೇಂದ್ರ ಭಟ್ಟ ಸ್ವಾಗತಿಸಿದರು.  ವಿನೇಶ ಭಟ್ಟ ನಿರೂಪಿಸಿದರು. ಉಮೇಶ ಭಾಗ್ವತ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT